ETV Bharat / state

'ಮುನ್ನಾಭಾಯ್' ಸ್ಟೈಲ್​​ನಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು : ಬಂಧಿತರ ಸಂಖ್ಯೆ 12ಕ್ಕೆ ಏರಿಕೆ - ಅಫಜಲಪುರ ಶಾಸಕರ ಗನ್‌ಮ್ಯಾನ್ ಬಂಧನ

ಈ ಅಕ್ರಮದಲ್ಲಿ ಜಿಲ್ಲೆಯ ಮತ್ತೋರ್ವ ಪ್ರಭಾವಿ ಮುಖಂಡ ಸಹ ಕಿಂಗ್ ಪಿನ್ ಆಗಿದ್ದಾನೆ ಎಂಬ ಮಾಹಿತಿ‌ ಹಯ್ಯಾಳ ದೇಸಾಯಿಯಿಂದ ಗೊತ್ತಾಗಿದೆ. ಈಗ ಸಿಕ್ಕಿರುವ ಮಾಹಿತಿ ಮೇರೆಗೆ ಆ ಕಿಂಗ್‌ಪಿನ್ ಪತ್ತೆಗಾಗಿ ಸಿಐಡಿ ಜಾಲ ಬೀಸಿದೆ..

'ಮುನ್ನಾಭಾಯ್' ಸ್ಟೈಲ್​​ನಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು

author img

By

Published : Apr 22, 2022, 12:49 PM IST

ಕಲಬುರಗಿ : ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಹೊಸದೊಂದು ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ. ಸಿಐಡಿ ಪೊಲೀಸರು ಬಂಧಿಸಿದ ಅಫಜಲಪುರ ಶಾಸಕರ ಗನ್‌ಮ್ಯಾನ್ ಹಯ್ಯಾಳ ದೇಸಾಯಿ ಪಕ್ಕಾ 'ಮುನ್ನಾಭಾಯ್ ಎಂಬಿಬಿಎಸ್' ಚಿತ್ರದ ಮಾದರಿಯಲ್ಲಿ ಪರೀಕ್ಷೆ ಬರೆದಿದ್ದ ಅನ್ನೋ ಸಂಗತಿ ಹೊರಬಿದ್ದಿದೆ.

ಓಎಂಆರ್ ಸೀಟಿನಲ್ಲಿ ಅಕ್ರಮವೆಸಗಿ ಆಯ್ಕೆಯಾದ ತಂಡದ ಬೇಟೆಯಾಡುತ್ತಿರುವ ಸಿಐಡಿ ಅಧಿಕಾರಿಗಳು ಮತ್ತೊಂದು ರೀತಿಯಿಂದ ಗ್ಯಾಂಗ್ ಪತ್ತೆ ಮಾಡಿದ್ದಾರೆ. ಬಾಲಿವುಟ್​​ ನಟ ಸಂಜಯ್​ ದತ್​ ಅಭಿನಯದ‌ 'ಮುನ್ನಾಭಾಯ್ ಎಂಬಿಬಿಎಸ್' ಚಿತ್ರದಲ್ಲಿ ಎಂಬಿಬಿಎಸ್ ಪರೀಕ್ಷೆ ಪಾಸ್ ಮಾಡಲು ಬ್ಯೂಟೂತ್ ಡಿವೈಸ್ ಬಳಕೆ ಮಾಡಲಾಗಿರುತ್ತದೆ. ಅದೇ ದಾರಿಯನ್ನು ಹಯ್ಯಾಳ ದೇಸಾಯಿ ಆಯ್ಕೆ ಮಾಡಿಕೊಂಡಿದ್ದ ಅಂಶ ಸಿಐಡಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

'ಮುನ್ನಾಭಾಯ್' ಸ್ಟೈಲ್​​ನಲ್ಲಿ ಪಿಎಸ್ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು

ಈತ ಬ್ಲೂಟೂತ್ ಡಿವೈಸ್ ಬಳಕೆ ಮಾಡಿಕೊಂಡು ಪರೀಕ್ಷಾ ಕೇಂದ್ರದ ಹೊರಗಿನವವರಿಂದ ಉತ್ತರ ಪಡೆದು ಪರೀಕ್ಷೆ ಬರೆದು ಹೆಚ್ಚಿನ ಅಂಕ ಪಡೆದು ಪಿಎಸ್ಐ ಆಯ್ಕೆ ಆಗಿದ್ದಾನೆ ಎಂದು ತಿಳಿದು ಬಂದಿದೆ. ಇದೇ ರೀತಿ ಅನೇಕರು ಸಹ ಪರೀಕ್ಷೆ ಬರೆದಿರುವ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲೂ ಈಗ ಸಿಐಡಿ ಅಧಿಕಾರಿಗಳ ತಂಡ‌ ಶೋಧ ಕಾರ್ಯ ಆರಂಭಿಸಿದೆ.

ಮತ್ತೊಬ್ಬ ಕಿಂಗ್‌ಪಿನ್ : ಈ ಅಕ್ರಮದಲ್ಲಿ ಜಿಲ್ಲೆಯ ಮತ್ತೋರ್ವ ಪ್ರಭಾವಿ ಮುಖಂಡ ಸಹ ಕಿಂಗ್ ಪಿನ್ ಆಗಿದ್ದಾನೆ ಎಂಬ ಮಾಹಿತಿ‌ ಹಯ್ಯಾಳ ದೇಸಾಯಿಯಿಂದ ಗೊತ್ತಾಗಿದೆ. ಈಗ ಸಿಕ್ಕಿರುವ ಮಾಹಿತಿ ಮೇರೆಗೆ ಆ ಕಿಂಗ್‌ಪಿನ್ ಪತ್ತೆಗಾಗಿ ಸಿಐಡಿ ಜಾಲ ಬೀಸಿದೆ. ಈಗಾಗಲೇ ಅನೇಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ನೂರಾರು ಜನರಿಗೆ ಕಿಂಗ್​ ಪಿನ್ ನೌಕರಿ ಕೊಡಿಸಿರುವ ಶಂಕೆ ಕೂಡ ಇದೆ. ಅಲ್ಲದೇ, ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಹ ಈತ ಸಿದ್ದತೆ ಮಾಡಿಕೊಳ್ಳುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ. ಈತನ ಬಂಧನಕ್ಕಾಗಿ ಸಿಐಡಿ ಸಾಕಷ್ಟು ಮಾಹಿತಿ ಕಲೆ ಹಾಕುತ್ತಿದೆ.

ಮತ್ತಿಬ್ಬರ ಬಂಧನ : ಇತ್ತ, ಅಕ್ರಮದಲ್ಲಿ ಭಾಗಿಯಾದ ಆರೋಪದ ಮೇಲೆ ಮತ್ತೆ ಇಬ್ಬರನ್ನು ಸಿಐಡಿ ತಂಡ ಬಂಧಿಸಿದೆ‌. ಅಭ್ಯರ್ಥಿ ವೀರೇಶ ಹಾಗೂ ಈತನಿಗೆ ಸಹಾಯ ಮಾಡಿದ್ದ ಅಫಜಲಪುರ ಮೂಲದ ಶರಣಬಸಪ್ಪ ಎಂಬುವರನ್ನು ಬಂಧಿಸಲಾಗಿದೆ. ಈ ಮೂಲಕ ಒಟ್ಟು ಬಂಧಿತರ ಸಂಖ್ಯೆ 12ಕ್ಕೆ ಏರಿಕೆ ಆಗಿದೆ.

ಇದನ್ನೂ ಓದಿ: ಗನ್‌ಮ್ಯಾನ್ ಅಕ್ರಮ ನೇಮಕಾತಿ ಬಗ್ಗೆ ನನಗೇನು ಗೊತ್ತಿಲ್ಲ: ಶಾಸಕ ಎಂ.ವೈ ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.