ETV Bharat / state

ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಕಲಬುರಗಿ ಯೋಧ ಹುತಾತ್ಮ.. ಮುಗಿಲು ಮುಟ್ಟಿತು ಕುಟುಂಬಸ್ಥರ ಆಕ್ರಂದನ - ಇಂಡೋ-ಬಾಂಗ್ಲಾ ಗಡಿ

ಹುತಾತ್ಮ ಯೋಧನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ 4 ವರ್ಷದ ಗಂಡು ಮಗುವಿದೆ. ಯೋಧನ ಪಾರ್ಥಿವ ಶರೀರ ನಾಳೆ ರಾತ್ರಿ ಹೊತ್ತಿಗೆ ಹೈದರಾಬಾದ್ ಮೂಲಕ ಸ್ವಗ್ರಾಮ ಚಿಂಚನಸೂರಕ್ಕೆ ಆಗಮಿಸುವ ಸಾಧ್ಯತೆ ಇದೆ. ಇಡೀ ಕುಟುಂಬದ ಜವಾಬ್ದಾರಿ ಜೊತೆ ದೇಶದ ರಕ್ಷಣೆಯ ಹೊಣೆ ಹೊತ್ತಿದ್ದ ಯೋಧನ ಸಾವಿನಿಂದ ಇಡೀ ಗ್ರಾಮವೇ ಕಣ್ಣೀರು ಸುರಿಸಿದೆ..

bsf-jawan-from-kalaburagi-martyred-at-indo-bangla-border
ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಕಲಬುರಗಿ ಯೋಧ ಹುತಾತ್ಮ
author img

By

Published : Aug 4, 2021, 6:21 PM IST

Updated : Aug 5, 2021, 5:23 PM IST

ಕಲಬುರಗಿ : ಪದವಿ ಓದುವಾಗಲೇ ದೇಶ ಸೇವೆಯ ಕನಸು ಕಂಡು ಸೈನ್ಯ ಸೇರಿದ್ದ ವೀರ ಇನ್ನೇನು ಮೂರು ತಿಂಗಳಲ್ಲಿ ನಿವೃತ್ತಿ ಪಡೆದು ಮನೆಗೆ ಬರಬೇಕಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿದೆ. ಯೋಧನ ಬರುವಿಕೆಯ ದಾರಿ ಕಾಯುತ್ತಿದ್ದ ಕುಟುಂಬಕ್ಕೀಗ ಬರಸಿಡಿಲು ಬಡಿದಂತಾಗಿದೆ. ಯೋಧ ರಾಜ್‌ಕುಮಾರ್‌ ಮಾಪಣ್ಣಾ ಮಾವೀನಕರ್ ಹುತಾತ್ಮರಾಗಿದ್ದಾರೆ.

ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಗ್ರಾಮದ ಬಿಎಸ್​​ಎಫ್ ಯೋಧ ರಾಜ್‌ಕುಮಾರ್‌ ಮಾಪಣ್ಣಾ ಮಾವೀನಕರ್, ದೇಶಕ್ಕಾಗಿ ಪ್ರಾಣತೆತ್ತಿದ್ದಾರೆ. ಇಂಡೋ-ಬಾಂಗ್ಲಾ ಗಡಿಯಲ್ಲಿ ಉಗ್ರರ ಗುಂಡಿಗೆ ಎದೆಗೊಟ್ಟು ಹುತಾತ್ಮರಾಗಿದ್ದಾರೆ. ದೇಶ ಸೇವೆಗೆಂದು ತನ್ನ ಜೀವ ಮುಡಿಪಿಟ್ಟ ಯೋಧನ ನೆನೆದು ಇಡೀ ಗ್ರಾಮವೀಗ ಶೋಕ ಸಾಗರದಲ್ಲಿ ಮುಳುಗಿದೆ.

ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಕಲಬುರಗಿ ಯೋಧ ಹುತಾತ್ಮ

ಯೋಧ ರಾಜ್‌ಕುಮಾರ್‌, ಕಲಬುರಗಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಎ ಓದುತ್ತಿರುವಾಗಲೇ ದೇಶ ಸೇವೆ ಮಾಡುವ ಮಹದಾಸೆಯಿಂದ 2002ರಲ್ಲಿ ಬಿಎಸ್‌ಎಫ್ ಸೇರಿದ್ದರು. ಕೋಲ್ಕತಾ, ಜಮ್ಮು & ಕಾಶ್ಮೀರ, ಅಸ್ಸೋಂ ಗಡಿಯಲ್ಲಿ ದೇಶ ರಕ್ಷಣೆ ಮಾಡುತ್ತ, ಕಳೆದೊಂದು ವರ್ಷದಿಂದ ತ್ರಿಪುರದ ಭಾರತ-ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇನ್ನೇನು ಮೂರು ತಿಂಗಳಲ್ಲಿ ಸೇನೆಯಿಂದ ನಿವೃತ್ತಿ ಆಗಬೇಕಿತ್ತು. ಅಷ್ಟರಲ್ಲೇ ಉಗ್ರರ ಗುಂಡಿಗೆ ಪ್ರಾಣತೆತ್ತಿದ್ದಾರೆ.

ಹುತಾತ್ಮ ಯೋಧನಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ 4 ವರ್ಷದ ಗಂಡು ಮಗುವಿದೆ. ಯೋಧನ ಪಾರ್ಥಿವ ಶರೀರ ನಾಳೆ ರಾತ್ರಿ ಹೊತ್ತಿಗೆ ಹೈದರಾಬಾದ್ ಮೂಲಕ ಸ್ವಗ್ರಾಮ ಚಿಂಚನಸೂರಕ್ಕೆ ಆಗಮಿಸುವ ಸಾಧ್ಯತೆ ಇದೆ. ಇಡೀ ಕುಟುಂಬದ ಜವಾಬ್ದಾರಿ ಜೊತೆ ದೇಶದ ರಕ್ಷಣೆಯ ಹೊಣೆ ಹೊತ್ತಿದ್ದ ಯೋಧನ ಸಾವಿನಿಂದ ಇಡೀ ಗ್ರಾಮವೇ ಕಣ್ಣೀರು ಸುರಿಸಿದೆ.

ಓದಿ: ಭೂ ವಿವಾದ: ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ.. ಐವರ ಕಗ್ಗೊಲೆ

Last Updated : Aug 5, 2021, 5:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.