ಕಲಬುರಗಿ: ಮೀನು ಹಿಡಿಯಲು ಹೋದ ಬಾಲಕ ಜಲ ಸಮಾಧಿಯಾದ ದುರ್ಘಟನೆ ಕಲಬುರಗಿಯ ಪ್ರಸಿದ್ಧ ಅಪ್ಪನ ಕೆರೆಯಲ್ಲಿ ನಡೆದಿದೆ.
ಸುಮಾರು 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇಬ್ಬರು ಬಾಲಕರು ಮೀನು ಹಿಡಿಯಲು ನೀರಿಗಿಳಿದಿದ್ದರು. ಈ ವೇಳೆ ಓರ್ವ ಬಾಲಕ ನೀರಿನಲ್ಲಿ ಮುಳುಗುತ್ತಿದ್ದಂತೆಯೇ ಮತ್ತೋರ್ವ ಬಾಲಕ ಪರಾರಿಯಾಗಿದ್ದಾನೆ. ಬಾಲಕ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಲು ಯತ್ನಿಸಿದ್ದಾರೆ, ಆದರೆ ಅವರ ಪ್ರಯತ್ನ ಸಫಲವಾಗಿಲ್ಲ.
ಈ ಸುದ್ದಿಯನ್ನೂ ಓದಿ: ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬ ಲಾಡ್ಜ್ನಲ್ಲಿ ಆತ್ಮಹತ್ಯೆಗೆ ಶರಣು
ನಂತರ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳ ಸಿಬ್ಬಂದಿ ಮತ್ತು ಎಸ್.ಡಿ.ಆರ್.ಎಫ್ ತಂಡದವರಿಂದ ಶವವನ್ನು ಮೇಲಕ್ಕೆತ್ತಲಾಯಿತು. ಸದ್ಯ ಬಾಲಕನ ಗುರುತು ಪತ್ತೆಯಾಗಿಲ್ಲ. ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.