ETV Bharat / state

ವಾಡಿ ಪುರಸಭೆ ವಾರ್ಡ್ ಉಪಚುನಾವಣೆ : ಶಾಸಕ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು - BJP wins in Wadi byelection news

ವಾರ್ಡ್ ನಂ.4ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಚಂದು 373 ಮತ ಗಳಿಸದರೆ ಎದುರಾಳಿ ಬಿಜೆಪಿ ಅಭ್ಯರ್ಥಿ ರವಿನಾಯಕ್ ಮಾನಸಿಂಗ್ 560 ಮತಗಳನ್ನು ಪಡೆದುಕೊಂಡು 187 ಮತಗಳಿಂದ ಜಯಭೇರಿ ಬಾರಿಸಿದ್ದಾರೆ..

ಶಾಸಕ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು

author img

By

Published : Sep 6, 2021, 4:58 PM IST

ಕಲಬುರಗಿ : ಕೆಪಿಸಿಸಿ ವಕ್ತಾರ ಶಾಸಕ ಪ್ರಿಯಾಂಕ್ ಖರ್ಗೆ ಮತಕ್ಷೇತ್ರ ಚಿತ್ತಾಪುರದ ವಾಡಿ ಪುರಸಭೆ ವಾರ್ಡ್ ಉಪಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.

ವಾಡಿ ಪುರಸಭೆ ವಾರ್ಡ್ ನಂ.23 ಹಾಗೂ 4ರ ಉಪಚುನಾವಣೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿದ್ದಾರೆ. ಪುರಸಭೆ ಸದಸ್ಯರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಸೆಪ್ಟೆಂಬರ್ 3ರಂದು ಚುನಾವಣೆ ನಡೆದಿತ್ತು. ಕಾಂಗ್ರೆಸ್ ಅಭ್ಯರ್ಥಿಗಳನ್ನ ಸೋಲಿಸುವ ಮೂಲಕ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.

ಶಾಸಕ ಪ್ರಿಯಾಂಕ್ ಖರ್ಗೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವು
ಬಿಜೆಪಿಯ ಇಬ್ಬರು ಅಭ್ಯರ್ಥಿಗಳ ವಿಜಯ ಪತಾಕೆ

ವಾರ್ಡ್ ನಂ.4ರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಚಂದು 373 ಮತ ಗಳಿಸದರೆ ಎದುರಾಳಿ ಬಿಜೆಪಿ ಅಭ್ಯರ್ಥಿ ರವಿನಾಯಕ್ ಮಾನಸಿಂಗ್ 560 ಮತಗಳನ್ನು ಪಡೆದುಕೊಂಡು 187 ಮತಗಳಿಂದ ಜಯಭೇರಿ ಬಾರಿಸಿದ್ದಾರೆ.

ವಾರ್ಡ್ ನಂ.23ರಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಪರಶುರಾಮ ಕಟ್ಟಿಮನಿ 397 ಮತಗಳನ್ನ ಪಡೆದರೆ, ಬಿಜೆಪಿ ಅಭ್ಯರ್ಥಿ ಅಮರೇಶ್ ಕುರಾಕುಂಟಾ 521 ಮತಗಳು ಪಡೆದು 124 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ವಾಡಿ ಪುರಸಭೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು.

ಓದಿ: ದೇಶಾದ್ಯಂತ ರಾಯಚೂರು ಗೋಪಿ ಚಂದನ ಗಣೇಶ ಮೂರ್ತಿಗೆ ಭಾರೀ ಡಿಮ್ಯಾಂಡ್​.. ಇದರ ವೈಶಿಷ್ಟ್ಯತೆ ಏನ್​ ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.