ಕಲಬುರಗಿ : ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಅಲ್ಲಮಪ್ರಭು ಪಾಟೀಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಪತ್ನಿ, ವೈದ್ಯೆ ಭಾಗ್ಯಶ್ರೀ ಪಾಟೀಲ್ ವಿರುದ್ಧವೂ ಆರೋಪ ಮಾಡಿದರು. ಇದೇ ವೇಳೆ ಈ ಕುರಿತಾದ ದಾಖಲೆಗಳನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ಹೇಳಿದರು.
ಅಲ್ಲದೆ ಪ್ರಿಯಾಂಕ್ ಖರ್ಗೆಯ ಬಲಗೈ ಬಂಟ ರಾಜು ಕಪನೂರ್ ಅಕ್ರಮ ಪಿಸ್ತೂಲ್ ಖರೀದಿ ಆರೋಪದ ಮೇಲೆ ಜೈಲಿಗೆ ಹೋಗಿ ಬಂದಿದ್ದಾನೆ. ಈ ಬಗ್ಗೆ ಕೇಳಲು ಹೋದರೆ ಅನಾರೋಗ್ಯ ಎಂದು ಹೇಳುತ್ತಾನೆ. ಈ ಬಗ್ಗೆಬಗ್ಗೆ ಪ್ರಿಯಾಂಕ್ ಖರ್ಗೆ ಮಾತಾಡುತ್ತಿಲ್ಲ ಎಂದರು.
ಜೊತೆಗೆ ಮಾಜಿ ವಿಧಾನ ಪರಿಷತ್ ಸದಸ್ಯ, ಕಾಂಗ್ರೆಸ್ ಮುಖಂಡ ಅಲ್ಲಮಪ್ರಭು ಪಾಟೀಲ್ ಸರ್ಕಾರಕ್ಕೆ ಮೋಸ ಮಾಡಿ ಅಕ್ರಮವಾಗಿ ಶಾಲೆ ನಡೆಸುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಯ ಹೆಸರಿನಲ್ಲಿ ಅನುಮತಿ ಪಡೆದು ಇಂಗ್ಲಿಷ್ ಮೀಡಿಯಂ ಸ್ಕೂಲ್ ನಡೆಸುತ್ತಿದ್ದಾರೆ. 60 ವರ್ಷದಿಂದ ಖರ್ಗೆ ಅವರ ಅಕ್ರಮ ಯಾರು ಹೊರಗಡೆ ತಂದಿಲ್ಲ. ಈಗ ನಾವು ಅಕ್ರಮ ಹೊರಗಡೆ ಹಾಕುತ್ತೇವೆ ಎಂದು ಮಣಿಕಂಠ ರಾಠೋಡ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಕಲಬುರಗಿ ಕಮಿಷನರ್ ಪತ್ನಿ ವಿರುದ್ಧ ಬಿಜೆಪಿ ಮುಖಂಡನ ಗಂಭೀರ ಆರೋಪ : ಕಮಿಷನರ್ ಸ್ಪಷ್ಟನೆ