ಕಲಬುರಗಿ: ಅಯೋಧ್ಯಾ ಶ್ರೀರಾಮ ಭವ್ಯ ಮೂರ್ತಿಯ ಸಲಹಾ ಸಮಿತಿಯ ಸದಸ್ಯರಾಗಿ ಮಾನಯ್ಯ ಬಡಿಗೇರ ಅವರನ್ನು ನೇಮಿಸಲಾಗಿದೆ. ಕಲಬುರಗಿಯ ಕೋಟನೂರ ಪ್ರದೇಶದಲ್ಲಿ ವಾಸವಿರುವ ಮಾನಯ್ಯ ಬಡಿಗೇರ ದೇಶದ ನಾನಾ ಕಡೆಗಳಲ್ಲಿ ಕೆತ್ತಿದ ದೇವರ ವಿಗ್ರಹಗಳು, ದೇಗುಲಗಳ ಬಾಗಿಲು, ಚೌಕಟ್ಟುಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಹೀಗಾಗಿ ಇವರು ಶಿಲ್ಪಕಲೆಯ ಬ್ರಹ್ಮ ಎಂದೇ ಪ್ರಸಿದ್ಧರು. ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಬಡಿಗೇರ ಅವರನ್ನು ಸನ್ಮಾನಿಸಿದರು.
ಇದನ್ನೂ ಓದಿ: ಅಯೋಧ್ಯೆ ನಗರಿಗೆ ಏಕರೂಪ ಬಣ್ಣ ಸಂಹಿತೆ: ಏನಿದು?