ಕಲಬುರಗಿ: ಸದಾ ಹಸನ್ನಮುಖಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ಚೌಕ್ ಠಾಣೆಯ ಎಎಸ್ಐ ಮಲ್ಲಿಕಾರ್ಜುನ ಪಂಚಕಟ್ಟಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ನಗರದಲ್ಲಿ ಸೋಂಕಿಗೆ ಬಲಿಯಾದ ಪೊಲೀಸ್ ಸಿಬ್ಬಂದಿ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.
ಕಳೆದ ಐದು ದಿನಗಳ ಹಿಂದೆ ಸೋಂಕು ತಗುಲಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಇಹಲೋಕ ತ್ಯಜಿಸಿದ್ದಾರೆ. ಮಲ್ಲಿಕಾರ್ಜುನ ಪಂಚಕಟ್ಟಿ ಅವರು ಕಳೆದ 3 ದಶಕಗಳಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಾ ಇದ್ದರು. ಇದೆ ಜೂನ್ ತಿಂಗಳಲ್ಲಿ ಅವರು ನಿವೃತ್ತಿಯಾಗಲಿದ್ದರು. ಆದರೆ ಕೊರೊನಾ ಅವರನ್ನ ಬಲಿ ಪಡೆದುಕೊಂಡಿದೆ.
ಇಲಾಖೆಯಲ್ಲಿ ಎಲ್ಲರೊಂದಿಗೆ ನಗುತ್ತಲೇ ಹಾಸ್ಯ ಮಾಡುವ ಮೂಲಕ ಎಲ್ಲರೊಂದಿಗೆ ಅನ್ನೋನ್ಯವಾಗಿದ್ರು. ಲಾಕ್ಡೌನ್ ಸಮಯದಲ್ಲಿಯೂ ಕರ್ತವ್ಯ ನಿರ್ವಹಿಸಿದ್ದರು. ಕೊರೊನಾ ಸೋಂಕಿಗೆ ರೋಜಾ ಠಾಣೆಯ ಎಎಸ್ಐ ಹಾಗೂ ಅಶೋಕ ನಗರ ಠಾಣೆಯ ಹೆಡ್ ಕಾನ್ಸಟೇಬಲ್ ಇದೀಗ ಚೌಕ್ ಠಾಣೆಯ ಎಎಸ್ಐ ಪೊಲೀಸ್ ಇಲಾಖೆಯ ಮೂವರನ್ನು ಕೊರೊನಾ ಬಲಿ ಪಡೆದಂತಾಗಿದೆ.