ETV Bharat / state

ಪಿಎಫ್ಐ ಬ್ಯಾನ್ ಮಾಡಿರುವುದು ಮುಸ್ಲಿಮರಲ್ಲಿಯೂ ಖುಷಿ ಮೂಡಿಸಿದೆ: ಚಕ್ರವರ್ತಿ ಸೂಲಿಬೆಲೆ - ವಿಶ್ಲೇಷಕ ಚಕ್ರವರ್ತಿ ಸೂಲಿಬೆಲೆ

ಪಿಎಫ್‌ಐ ಬ್ಯಾನ್ ಆಗಿರುವುದರಿಂದ ಕೆಲವು ಮುಸ್ಲಿಂ ಮುಖಂಡರು ಕಣ್ಣೀರು ಇಡುತ್ತಿರೋದು ನಿಜ. ಆದರೆ ಬ್ಯಾನ್ ಆಗಿರೋದ್ರಿಂದ ಬಹುತೇಕ ಮುಸ್ಲಿಂಮರಿಗೆ ಖುಷಿ ಆಗಿದೆ ಎಂದು ವಿಶ್ಲೇಷಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ವಿಶ್ಲೇಷಕ ಚಕ್ರವರ್ತಿ ಸೂಲಿಬೆಲೆ
ವಿಶ್ಲೇಷಕ ಚಕ್ರವರ್ತಿ ಸೂಲಿಬೆಲೆ
author img

By

Published : Sep 28, 2022, 6:10 PM IST

Updated : Sep 28, 2022, 7:08 PM IST

ಕಲಬುರಗಿ: ಪಿಎಫ್ಐ ಬ್ಯಾನ್ ಆಗಿರೋದಕ್ಕೆ ಕೆಲವು ಮುಸ್ಲಿಮರಿಗೆ ನೋವಾಗಿರಬಹುದು. ಆದರೆ ಅವರನ್ನು ಹೊರತು ಪಡಿಸಿ, ಬಹುತೇಕ ಎಲ್ಲಾ ಮುಸ್ಲಿಂ ಸಮುದಾಯಕ್ಕೆ ಇದು ಖುಷಿ‌ ಮೂಡಿಸಿದೆ ಎಂದು ಚಿಂತಕ, ವಿಶ್ಲೇಷಕ ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ.

ಕಲಬುರಗಿಯಲ್ಲಿ ಮಾತನಾಡಿದ ಅವರು, ದೇಶ ವಿರೋಧಿ‌ ಚಟುವಟಿಕೆ ಕೃತ್ಯದಲ್ಲಿ ಪಿಎಫ್ಐ ಸಂಘಟನೆ ತೊಡಗಿತ್ತು. ಇದಕ್ಕೆ ಸ್ಪಷ್ಟವಾದ ಆಧಾರಗಳು ಸಿಕ್ಕಿವೆ. ಕೇಂದ್ರ ಸರ್ಕಾರ ಐದು ವರ್ಷ ಬ್ಯಾನ್ ಮಾಡುವ ಮೂಲಕ ಪಿಎಫ್ಐ ಸಂಘಟನೆಯ ಹೆಡೆಮುರಿ ಕಟ್ಟಿದೆ. ಐದು ವರ್ಷದ ನಂತರವು ಪಿಎಫ್ಐ ಮರುಜೀವ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ವಿಶ್ಲೇಷಕ ಚಕ್ರವರ್ತಿ ಸೂಲಿಬೆಲೆ

ಚುನಾವಣೆ ಗಿಮಿಕ್​ಗಾಗಿ ಕೇಂದ್ರ ಸರ್ಕಾರ ಹೀಗೆ ಮಾಡಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಸೂಲಿಬೆಲೆ, ಕೇಂದ್ರ ಏಕಾಏಕಿ ದಾಳಿ ನಡೆಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡಿಲ್ಲ. ಒಂದೂವರೆ ತಿಂಗಳಿನಿಂದ ನಿರಂತರ ಕಾರ್ಯಾಚರಣೆ ನಡೆಸಿ, ಅವರ ಹಜ್ಜೆಗಳನ್ನು ಕಲೆಹಾಕಿದ್ದಾರೆ.

ಇದನ್ನೂ ಓದಿ: ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡವರಿಗೆ ಪಿಎಫ್​​ಐ ನಿಷೇಧ ಎಚ್ಚರಿಕೆ ಗಂಟೆ: ಪ್ರಹ್ಲಾದ್​ ಜೋಶಿ

ಪಿಎಫ್‌ಐ ಟೆರರಿಸ್ಟ್ ಆ್ಯಕ್ಟಿವಿಟಿನಲ್ಲಿ, ದೇಶದಲ್ಲಿ ಆಂತರಿಕ ದಂಗೆ ಎಬ್ಬಿಸುವ ಕೆಲಸ ಮಾಡ್ತಿದೆ ಅನ್ನೋದನ್ನು ಖಚಿತ‌ ಪಡೆಸಿಕೊಂಡು ಏಕಕಾಲಕ್ಕೆ ದಾಳಿ ನಡೆಸಿ ಹಲವರನ್ನು ಬಂಧಿಸಿದ್ದಾರೆ. ದಾಳಿ ವೇಳೆ ಸಾಕಷ್ಟು ಪುರಾವೆಗಳು ದೊರೆತಿವೆ. ಇದಕ್ಕಾಗಿಯೇ ಪಿಎಫ್‌ಐಯನ್ನ ಬ್ಯಾನ್ ಮಾಡಲಾಗಿದೆ ಎಂದರು.

Last Updated : Sep 28, 2022, 7:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.