ETV Bharat / state

ವಿದ್ಯುತ್​ ಶಾಕ್​ಗೊಳಗಾದ ಮಹಿಳೆಯ ರಕ್ಷಣೆಗೆ ಹೋದ ಯುವಕನೇ ಅವಘಡಕ್ಕೆ ಬಲಿ..!

ವಿದ್ಯುತ್ ಶಾಕ್​ಗೊಳಗಾದ ಮಹಿಳೆಯ ರಕ್ಷಣೆಗೆ ಹೋದ ಯುವಕನೇ ವಿದ್ಯುತ್ ಅವಘಡಕ್ಕೆ ಬಲಿಯಾದ ದಾರುಣ ಘಟನೆ ಕಲಬುರಗಿ ಜಿಲ್ಲೆಯ ಹೀರಾಪುರ ನಗರದಲ್ಲಿ ನಡೆದಿದೆ.

kalaburgi
ವಿದ್ಯುತ್ ಅವಘಡಕ್ಕೆ ಬಲಿಯಾದ ಮಧುಕರ್ ಜಾಪೂರ
author img

By

Published : Dec 3, 2019, 10:25 AM IST

ಕಲಬುರಗಿ: ವಿದ್ಯುತ್ ಶಾಕ್​ಗೊಳಗಾದ ಮಹಿಳೆಯ ರಕ್ಷಣೆಗೆ ಹೋದ ಯುವಕನೇ ವಿದ್ಯುತ್ ಅವಘಡಕ್ಕೆ ಬಲಿಯಾದ ದಾರುಣ ಘಟನೆ ಜಿಲ್ಲೆಯ ಹೀರಾಪುರ ನಗರದಲ್ಲಿ ನಡೆದಿದೆ.

ಹೀರಾಪುರ ಗ್ರಾಮದ ನಿವಾಸಿ ಮಧುಕರ್ ಜಾಪೂರ (30) ಮೃತ ಯುವಕ. ಇಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದ ಬಳಿ ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಆದರೆ ಅದನ್ನು ಗಮನಿಸದ ಮಹಿಳೆಯೋರ್ವರು ಬಹಿರ್ದೆಸೆಗೆಂದು ತೆರಳಿದ್ದರು. ಅಲ್ಲಿ ಆ ಮಹಿಳೆಗೆ ವಿದ್ಯುತ್ ಶಾಕ್ ತಗುಲಿದೆ. ಇದನ್ನು ಗಮನಿಸಿದ ಮಧುಕರ ಆಕೆಯನ್ನು ರಕ್ಷಿಸಲೆಂದು ಮುಂದಾಗಿದ್ದಾನೆ. ಆದರೆ ದುರಾದೃಷ್ಟವೆಂಬಂತೆ ಆತನೇ ಸಾವನ್ನಪ್ಪಿದ್ದಾನೆ.

ಸದ್ಯ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಧುಕರನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಇನ್ನು ಈ ಘಟನೆಗೆ ಜೆಸ್ಕಾಂ ಸಿಬ್ಬಂದಿಗಳ ನಿರ್ಲಕ್ಷ್ಯ ಎಂದು ಜನರು ಆರೋಪಿಸದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಲಬುರಗಿ: ವಿದ್ಯುತ್ ಶಾಕ್ ನಿಂದ ಮಹಿಳೆಯನ್ನು ರಕ್ಷಿಸಲು ಹೋಗಿ ಯುವಕ ವಿದ್ಯುತ್ ಅವಘಡಕ್ಕೆ ಬಲಿಯಾದ ದಾರುಣ ಘಟನೆ ಹೀರಾಪುರ ನಗರದಲ್ಲಿ ನಡೆದಿದೆ.

Body:ಹೀರಾಪುರ ಗ್ರಾಮದ ನಿವಾಸಿ ಮಧುಕರ್ ಜಾಪೂರ (30) ಮೃತ ಯುವಕ ಎಂದು ಗುರುತಿಸಲಾಗಿದೆ. ಹೀರಾಪೂರ ಮಲ್ಲಿಕಾರ್ಜುನ ದೇವಸ್ಥಾನ ಹತ್ತಿತ ನಿನ್ನೆ ರಾತ್ರಿ ಮಳೆ ಗಾಳಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದಿದೆ. ಬೆಳಗ್ಗೆ ಬಹಿರ್ದೆಸೆಗೆ ಎಂದು ಹೊರಟಿದ್ದ ಶಿವಲೀಲಾ ಎಂಬ ಮಹಿಳೆಗೆ ವಿದ್ಯುತ್ ಶಾಕ್ ತಗುಲಿದೆ. ಇದನ್ನು ಗಮನಿಸಿದ ಮಧುಕರ ಆಕೆಯನ್ನು ರಕ್ಷಿಸಿದ್ದಾ. ಆದ್ರೆ ದುರಾದೃಷ್ಟ ಅದೆ ವಿದ್ಯುತ್ ತಂತಿಗೆ ತಗುಲಿ ಪ್ರಾಣ ಬಿಟ್ಟಿದ್ದಾನೆ.

ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ವಿದ್ಯುತ್ ಸ್ಪರ್ಷದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ ಮಧುಕರ್ ಕಳೆಬರವನ್ನು ಮರಣೊತ್ತರ ಪರಿಕ್ಷೆಗೆ ರವಾನಿಸಲಾಗಿದೆ. ಇದೆ ವೇಳೆ ಜೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಜನತೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.