ETV Bharat / state

ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವಕ್ಕೆ ಸಂಭ್ರಮದ ಕಳೆ.. ಕಲಾವಿದರ ಕಲರವಕ್ಕೆ ಮನಸೋತ ಕಲಬುರಗಿ ಮಂದಿ

ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವದ ಹಿನ್ನೆಲೆ ಇಂದು ಕಲಬುರಗಿ ನಗರದಲ್ಲಿ ಕಲಾ ತಂಡಗಳ ಕಲರವ ಕಣ್ಮನ ಸೆಳೆಯಿತು.

ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವಕ್ಕೆ ಸಂಭ್ರಮ

author img

By

Published : Sep 15, 2022, 9:49 PM IST

Updated : Sep 15, 2022, 10:58 PM IST

ಕಲಬುರಗಿ: ದೇಶಕ್ಕೆ ಆಗಸ್ಟ್ 15 ರಂದು ಸ್ವಾತಂತ್ರ್ಯ ಸಿಕ್ಕಿದ್ರೆ, ನಿಜಾಮನ ಕಪಿಮುಷ್ಟಿಯಲ್ಲಿದ್ದ ಕಲ್ಯಾಣ ಕರ್ನಾಟಕಕ್ಕೆ ಸೆಪ್ಟೆಂಬರ್ 17 ರಂದು ಸ್ವಾತಂತ್ರ್ಯ ದೊರೆತಿದೆ. ಸ್ವಾತಂತ್ರ್ಯ ದೊರೆತು 75 ವರ್ಷಗಳಾಗುತ್ತಿದ್ದು, ಕಲ್ಯಾಣ ಕರ್ನಾಟಕದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಕಳೆಗಟ್ಟಿದೆ. ಮೂರು ದಿನಗಳ ಕಾಲ ಭರದಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ.

ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವಕ್ಕೆ ಸಂಭ್ರಮದ ಕಳೆ

ಬ್ರಿಟಿಷರಿಂದ ಭಾರತಕ್ಕೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದೊರೆತಿದ್ದರೆ, ಹೈದರಾಬಾದ್ ನಿಜಾಮನ ಕಪಿಮುಷ್ಟಿಯಿಂದ ಅಂದಿನ ಹೈದರಾಬಾದ್ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕಕ್ಕೆ 17 ಸೆಪ್ಟೆಂಬರ್ 1948 ರಲ್ಲಿ ಸ್ವಾತಂತ್ರ್ಯವಾಗಿದೆ. ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯವಾಗಿ 75 ವರ್ಷವಾಗುತ್ತಿದ್ದು, ಸರ್ಕಾರದಿಂದ ಅಮೃತ ಮಹೋತ್ಸವ ಆಚರಿಸಲಾಗ್ತಿದೆ. ಅಮೃತ ಮಹೋತ್ಸವದ ಹಿನ್ನೆಲೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಭರದ ಸಿದ್ದತೆ ಮಾಡಿಕೊಳ್ಳಲಾಗಿದೆ.

ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವ
ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವ

ಕಣ್ಮನ ಸೆಳೆದ ಕಲಾ ತಂಡಗಳ ಕಲವರ: ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಹಿನ್ನೆಲೆ ಇಂದು ನಗರದಲ್ಲಿ ಕಲಾ ತಂಡಗಳ ಕಲರವ ಕಣ್ಮನ ಸೆಳೆಯಿತು. ನಗರದ ನಗರೇಶ್ವರ ಶಾಲೆಯಿಂದ ನಗರದ ಪ್ರಮುಖ ರಸ್ತೆ ಮೂಲಕ ಕೇಂದ್ರ ಬಸ್ ನಿಲ್ದಾಣದ ವರೆಗೆ ಕಲಾತಂಡದ ಮೆರವಣಿಗೆ ಜರುಗಿತು.

ಡೊಳ್ಳು ಬಾರಿಸುತ್ತಿರುವುದು
ಡೊಳ್ಳು ಬಾರಿಸುತ್ತಿರುವುದು

ಸ್ಥಬ್ದ ಚಿತ್ರಗಳ ಪ್ರದರ್ಶನ, ವೀರಗಾಸೆ ಕುಣಿತ, ಡೊಳ್ಳು ಕುಣಿತ ಸೇರಿದಂತೆ 24 ವಿವಿಧ ಸಾಂಸ್ಕೃತಿಕ ಕಲಾತಂಡಗಳ 200 ಕಲಾವಿದರು ಭಾಗಿಯಾಗಿದ್ದರು. ನಗರದ ಎಸ್​ವಿಪಿ ವೃತ್ತದ ಪ್ರಮುಖ ರಸ್ತೆಯಲ್ಲಿ ಸಾಗಿದ ಸಾಂಸ್ಕೃತಿಕ ಕಲಾ ತಂಡಗಳ ಭವ್ಯ ಮೆರವಣಿಗೆ ಎಲ್ಲರನ್ನೂ ಆಕರ್ಷಿಸಿ ಅಮೃತ ಮಹೋತ್ಸವದ ಕಳೆ ತಂದು ಕೊಟ್ಟಿತ್ತು. ಸಾಂಸ್ಕೃತಿಕ ಕಲಾ ತಂಡಗಳ ಮೆರವಣಿಗೆಯಲ್ಲಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಸಂಸದ ಉಮೇಶ್ ಜಾಧವ್ ಸೇರಿದಂತೆ, ಅಧಿಕಾರಿಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ಕಲಾವಿದರು
ಕಲಾವಿದರು

ಕಲ್ಯಾಣ ಕರ್ನಾಟಕ ವ್ಯಾಪಾರಸ್ಥರಿಂದ ಮಳಿಗೆ: ಇಂದಿನಿಂದ ಸೆಪ್ಟೆಂಬರ್ 17 ರ ವರೆಗೆ ಮೂರು ದಿನಗಳ ಕಾಲ ಅಮೃತ ಮಹೋತ್ಸವ ಜರುಗುತ್ತಿದ್ದು, ಬೃಹತ್ ವೇದಿಕೆ ಕಾರ್ಯಕ್ರಮಕ್ಕೆ ನಗರದ ನೂತನ ವಿದ್ಯಾಲಯ ಮೈದಾನದಲ್ಲಿ ಭರದ ಸಿದ್ದತೆ ನಡೆಯುತ್ತಿದೆ. ಮೂರು ದಿನಗಳ ಕಾಲ ಕಲ್ಯಾಣ ಕರ್ನಾಟಕದ ಅತಿದೊಡ್ಡ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ.

ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವ
ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವ

ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 200 ಕ್ಕೂ ಹೆಚ್ಚು ಸ್ಟಾಲ್​ಗಳನ್ನ ಹಾಕಲಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳ ಭೌಗೋಳಿಕ ಮತ್ತು ಸ್ಥಳೀಯವಾಗಿ ಮಹತ್ವ ಪಡೆದಿರುವ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ವರ್ತಕರು ಮೇಳದಲ್ಲಿ ಪಾಲ್ಗೊಂಡಿದ್ದಾರೆ.

ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವ
ಕಲ್ಯಾಣ‌ ನಾಡಿನಲ್ಲಿ ಅಮೃತ ಮಹೋತ್ಸವ

ಸಿಎಂ ಆಗಮನ, 40 ಸಾವಿರ ಜನ ಸೇರುವ ನೀರಿಕ್ಷೆ: ಅಮೃತ ಮಹೋತ್ಸವ ಸಂಭ್ರಮಕ್ಕೆ ವಾಟರ್ ಪ್ರೂಫ್ ಪೆಂಡಾಲ್ ನ ಬೃಹತ್ ವೇದಿಕೆ ಸಿದ್ದತೆ ಭರದಿಂದ ಸಾಗುತ್ತಿದೆ. ಅಮೃತ ಮಹೋತ್ಸವ ಹಿನ್ನೆಲೆ ಕಲಬುರಗಿ ನಗರದಾದ್ಯಂತ ಸ್ವಾಗತ ಕಮಾನು, ಫ್ಲೇಕ್ಸ್, ಬ್ಯಾನರ್​ಗಳು ರಾರಾಜಿಸುತ್ತಿವೆ.

ಇನ್ನು ಸೆಪ್ಟೆಂಬರ್ 17 ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ದಿವಸದ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಕಲಬುರಗಿಗೆ ಆಗಮಿಸುತ್ತಿದ್ದು, ಅಂದು ಬೆಳಗ್ಗೆ 8:30 ಕ್ಕೆ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತಕ್ಕೆ ಮಾಲಾರ್ಪಣೆ ಮಾಡಿ 9 ಗಂಟೆಗೆ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವರು.

ನಂತರ ಎನ್ ವಿ ಮೈದಾನದಲ್ಲಿ ಆಯೋಜನೆ ಮಾಡಿರುವ ಅಮೃತ ಮಹೋತ್ಸವದಲ್ಲಿ ಬಸವರಾಜ ಬೊಮ್ಮಾಯಿ ಮಾತಾಡಲಿದ್ದಾರೆ. ಅಮೃತ ಮಹೋತ್ಸವದ ವೈಭವದ ಕಾರ್ಯಕ್ರಮದಲ್ಲಿ 7 ಜಿಲ್ಲೆಗಳಿಂದ ಜನ ಆಗಮಿಸಲಿದ್ದು, ಸುಮಾರು 40 ಸಾವಿಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.

ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವ ಯಶಸ್ವಿಗಾಗಿ ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದೆ. ಒಟ್ಟಿನಲ್ಲಿ ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆ ಬಿಸಿಲೂರು ಕಲಬುರಗಿ ಕಂಗೊಳಿಸುತ್ತಿದ್ದು, ಅಮೃತ ಮಹೋತ್ಸವದ ಹಬ್ಬ ಮನೆ-ಮನಗಳಲ್ಲಿ ಮನೆ ಮಾಡಿದೆ.

ಓದಿ: ವೆಂಟಿಲೇಟರ್​ ಸಮಸ್ಯೆ ಆಗಿಲ್ಲ, ವಿದ್ಯುತ್​ ಕೈಕೊಟ್ಟಿದ್ದರಿಂದ ಸಾವಾಗಿಲ್ಲ: ಡಿಸಿ ಪವನ್​ ಕುಮಾರ್​ ಮಾಲಪಾಟಿ

Last Updated : Sep 15, 2022, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.