ETV Bharat / state

ವಿದ್ಯಾರ್ಥಿಗಳಿಗೆ ಕಳಪೆ ಶೂ ವಿತರಣೆ ಆರೋಪ.. ಮುಖ್ಯೋಪಾಧ್ಯಾಯರು ನಡೆಸಿದ್ದಾರಾ ಕಮಿಷನ್​ ದಂಧೆ ? - ಶ್ಯೂ ಖರೀದಿಯಲ್ಲಿ ಕಮಿಷನ್ ದಂಧೆ

ಸರ್ಕಾರಿ ಶಾಲೆ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ವಿತರಣೆ ಆರೋಪ - ಮುಖ್ಯೋಪಾಧ್ಯಾಯರು ಮತ್ತು ಎಸ್​ಡಿಎಮ್​ಸಿ ಸದಸ್ಯರಿಂದ ನಡೆಯುತ್ತಿದೆಯಾ ಕಮಿಷನ್​ ದಂಧೆ ?- ಸಾಮಾಜಿಕ ಕಾರ್ಯಕರ್ತರ ಆಕ್ರೋಶ

Alleged distribution of poor quality shoes
ಕಳಪೆ ಶೂ ವಿತರಣೆ ಆರೋಪ
author img

By

Published : Feb 4, 2023, 6:34 AM IST

ಕಳಪೆ ಶೂ ವಿತರಣೆ ಮಾಡಲಾಗಿದ್ದು ಮುಖ್ಯೋಪಾಧ್ಯಾಯರು ಕಮಿಷನ್​ ದಂಧೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ..

ಕಲಬುರಗಿ: ಸತ್ತವರನ್ನ ತಂದು ನಿಲ್ಲಿಸುತ್ತಿರಿ, ಉತ್ಸವಗಳನ್ನ ಮಾಡುತ್ತಿರಿ, ಆದರೆ ಬಡ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಮನಸ್ಸು ಇಲ್ಲ ಎಂದರೆ ಸರ್ಕಾರಕ್ಕೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಸರ್ಕಾರಿ ಶಾಲಾ ಮಕ್ಕಳಿಗೆ ಶೂ ಮತ್ತು ಸಮವಸ್ತ್ರ ಕೊಡಲು ವಿಳಂಬ ಹಿನ್ನೆಲೆ ರಾಜ್ಯ ಸರ್ಕಾರಕ್ಕೆ ಇತ್ತೀಚೆಗೆ ಹೀಗೆ ಹೈಕೋರ್ಟ್ ಛೀಮಾರಿ ಹಾಕಿತ್ತು. ಹೈಕೋರ್ಟ್ ಛೀಮಾರಿ ಬಳಿಕ ಶಿಕ್ಷಣ ಇಲಾಖೆ ಮಕ್ಕಳಿಗೆ ಶೂ ಮತ್ತು ಸಾಕ್ಸ್ ಖರೀದಿಸಲು ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಶಾಲೆಯ ಮುಖ್ಯೋಪಾಧ್ಯಾಯರು ಮಕ್ಕಳಿಗೆ ಕಳಪೆ ಶೂ ಹಾಗೂ ಸಾಕ್ಸ್ ನೀಡಿ ಖರೀದಿಯಲ್ಲಿ ಕಮೀಷನ್ ಹೊಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

"ಹೈಕೋರ್ಟ್ ಛೀಮಾರಿ ಬಳಿಕ ಎಚ್ಚೆತ್ತ ಸರ್ಕಾರ ತರಾತೂರಿಯಲ್ಲಿ ಸಮವಸ್ತ್ರ, ಶೂ ಮತ್ತು ಸಾಕ್ಸ್ ವಿತರಣೆ ಮಾಡಲು ಸರ್ಕಾರ ಶಾಲೆಗೆ ಸೂಚನೆ ನೀಡಿತು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಎಸ್​ಡಿಎಂಸಿ ಅಧ್ಯಕ್ಷರು ಅಕ್ರಮ ಎಸಗಲು ಮುಂದಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಪ್ರತಿ ವಿದ್ಯಾರ್ಥಿಯ ಒಂದು ಜೊತೆ ಶೂ ಖರೀದಿಯಲ್ಲಿ 60 ರಿಂದ 80 ರೂಪಾಯಿ ವರೆಗೆ ಕಮಿಷನ್​ ಮಾಡಿರುವ ಬಗ್ಗೆ ಖುದ್ದು ಸರ್ಕಾರಿ ಶಾಲೆಯ ಹೆಡ್ ಮಾಸ್ಟರ್ ಒಬ್ಬರು ಬಾಯ್ಬಿಟ್ಟಿದ್ದಾರೆ‌" ಎಂದು ಸಾಮಾಜಿಕ ಕಾರ್ಯಕರ್ತ ಶರಣ್ ಐ ಟಿ ಆರೋಪಿಸಿದ್ದಾರೆ.

"ಹೆಡ್ ಮಾಸ್ಟರ್​ಗಳ ಕಮಿಷನ್ ಬಗ್ಗೆ ತಿಳಿದ ಅಂಗಡಿ ಮಾಲೀಕರು ಲೋ ಕ್ವಾಲಿಟಿ, ಹಳೆ ಸ್ಟಾಕ್ ಶೂಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ ಶೂ ಹಾಕಿದ ಕೆಲವೇ ದಿನಗಳಲ್ಲಿ ಕಿತ್ತು ಹೋಗುತ್ತಿವೆ‌. ಇನ್ನು ಶ್ಯೂ ಖರೀದಿಯಲ್ಲಿ ಕಮಿಷನ್ ದಂಧೆ ಹೇಗೆ ನಡೆಯುತ್ತಿರೋ ಬಗ್ಗೆ ಓರ್ವ ಮುಖ್ಯೋಪಾಧ್ಯಾಯ ಹೇಳಿದ್ದಾರೆ" ಎನ್ನುತ್ತಾರೆ ಶರಣ್​.

ಇನ್ನು ಶೂ, ಸಾಕ್ಸ್ ಖರೀದಿಗಾಗಿ ಶಿಕ್ಷಣ ಇಲಾಖೆ ಕೆಲವು ಮಾನದಂಡಗಳನ್ನ ವಿಧಿಸಿದೆ‌. 1-5 ನೇ ತರಗತಿ ವಿದ್ಯಾರ್ಥಿಗಳಿಗೆ 1 ಜೊತೆ ಶೂ ಹಾಗು 2 ಜೊತೆ ಸಾಕ್ಸ್ ಖರೀದಿಗೆ 265 ರೂಪಾಯಿ ನಿಗಧಿ ಮಾಡಿದೆ. 6- 8 ನೇ ವಿದ್ಯಾರ್ಥಿಗಳಿಗೆ 295 ರೂಪಾಯಿ ನಿಗದಿ ಮಾಡಿದೆ. ಅದೇ ರೀತಿ 8-10 ನೇ ತರಗತಿ‌ ಮಕ್ಕಳಿಗೆ 435 ರೂಪಾಯಿ ಎಂದು ಸೂಚನೆಯಲ್ಲಿದೆ. ರಾಜ್ಯದ ಒಟ್ಟು 46.37 ಲಕ್ಷ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರ ಶೂ ಖರೀದಿಗಾಗಿ ಒಟ್ಟು 132 ಕೋಟಿ ರೂಪಾಯಿ ಅನುದಾನ ಸರ್ಕಾರ ಮೀಸಲಿಟ್ಟಿದೆ.

ಸರ್ಕಾರದ ಈ ಯೋಜನೆಯನ್ನು ಕಲಬುರಗಿ ಜಿಲ್ಲೆಯ ಕೆಲವು ಶಾಲೆ ಮುಖ್ಯೋಪಾಧ್ಯಾಯರು ಹಾಗು ಎಸ್‌ಡಿಎಂಸಿ ಸದಸ್ಯರು ಕಮೀಷನ್ ಹೊಡೆಯಲು ಕಳಪೆ ಶೂ ವಿತರಣೆ ಮಾಡಿ ಸರ್ಕಾರಿ ಶಾಲೆ ಮಕ್ಕಳಿಗೆ ದ್ರೋಹ ಬಗೆಯುತ್ತಿದ್ದಾರೆ. ಈ ಶೂ ಖರೀದಿ ಅಕ್ರಮ ಬಯಲಿಗೆಳೆದಿರೋ ಸಾಮಾಜಿಕ ಹೋರಾಟಗಾರರಾದ ಶರಣ್ ಐಟಿ, ಶಿವಕುಮಾರ ರೇಷ್ಮಿ ಅಕ್ರಮದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

"ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗಾಗಿ ಸರ್ಕಾರ 132 ಕೋಟಿ ರೂಪಾಯಿ ಅನುದಾನ ನೀಡಿದೆ. ಆದರೆ ಶಾಲೆಯಲ್ಲಿ ನಡೆದ ಅಕ್ರಮದಿಂದ ಮಕ್ಕಳಿಗೆ ವಿತರಣೆ ಮಾಡಿರುವ ಶೂಗಳು ಕೆಲವೇ ದಿನಗಳಲ್ಲಿ ಕಿತ್ತು ಹೋಗಿವೆ. ಕಮಿಷನ್​ಗಾಗಿ ಕಾಟಾಚಾರಕ್ಕೆ ಕಳಪೆ ಶೂ ವಿತರಣೆ ಆಗಿರುವುದರಿಂದ ಕಿತ್ತುಹೋಗಿ ಚಪ್ಪಲಿಗಳನ್ನು ಧರಿಸಿಕೊಂಡು ಶಾಲೆಗೆ ಮಕ್ಕಳು ಬರುವಂತಾಗಿದೆ" ಎಂದು ಸಾಮಾಜಿಕ ಕಾರ್ಯಕರ್ತ ಶಿವಕುಮಾರ ರೇಷ್ಮಿ ದೂರಿದ್ದಾರೆ.

ಮುಖ್ಯೋಪಾಧ್ಯಾಯರಾದ ಅಂಬಣ್ಣಾ ಬಿರಾದಾರ ಮಾತನಾಡಿ, "ಶೂ ಖರೀದಿಸುವಾಗ ಗುಣಮಟ್ಟದ ಬಗ್ಗೆ ಪರಿಶೀಲಿಸಿ ನಾವು ತೆಗೆದುಕೊಂಡಿದ್ದೇವೆ. ದೂರಿನ ಬಗ್ಗೆ ಗಮನಕ್ಕೆ ಬಂದಿದ್ದು, ನಮಗೆ ಶೂ ಪೂರೈಸಿದವರೊಂದಿಗೆ ಈ ಬಗ್ಗೆ ಮಾತನಾಡುತ್ತೇನೆ. ಬದಲಾವಣೆ ಮಾಡಿಕೊಡುವಂತೆ ಹೇಳುತ್ತೇವೆ. ಕ್ವಾಲಿಟಿ ಚೆಕ್​ನ ವರದಿ ಕೊಟ್ಟ ನಂತರವೇ ಖರೀದಿ ಮಾಡಿದ್ದೇವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗಲಿಲ್ಲ​: ತಂದೆಯನ್ನು ಹೆಗಲ ಮೇಲೆ ಹೊತ್ತು ಶಾಸಕರ ಮನೆಗೆ ಬಂದ ಮಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.