ETV Bharat / state

ಕಲಬುರಗಿ ಡಿಸಿ ಕಚೇರಿ‌ ಆವರಣದಲ್ಲಿ ಮದ್ಯದ ಬಾಟಲಿಗಳು ಪತ್ತೆ

ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ..

Alcohol bottles in Kalaburagi DC office premises
ಕಲಬುರಗಿ ಡಿಸಿ ಕಚೇರಿ‌ ಆವರಣದಲ್ಲಿ ಮದ್ಯದ ಬಾಟಲಿಗಳು
author img

By

Published : Jun 15, 2022, 5:03 PM IST

ಕಲಬುರಗಿ : ಕಲಬುರಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಕಿಡಿಗೇಡಿಗಳು ಮದ್ಯ ಸೇವಿಸಿ ಕಚೇರಿ ಆವರಣದ ಗೇಟ್ ಪಕ್ಕದಲ್ಲಿಯೇ ಬಾಟಲಿಗಳನ್ನು ಎಸೆದು ಹೋಗುತ್ತಿದ್ದಾರೆ. ಹಾಗಾಗಿ, ಇದು ಜಿಲ್ಲಾಧಿಕಾರಿ ಕಚೇರಿ ಆವರಣವೋ ಅಥವಾ ಓಪನ್ ಬಾರೋ ಎಂಬ ಪ್ರಶ್ನೆಗಳೆದ್ದಿವೆ.

ಡಿಸಿ ಕಚೇರಿ ಆವರಣದಲ್ಲಿ ಬಾಟಲ್‌ಗಳ ಹಾವಳಿ..

ಜಿಲ್ಲಾಧಿಕಾರಿಗಳ ಕಚೇರಿ ಎಂದ ಮೇಲೆ ಪ್ರತಿನಿತ್ಯ ಅಹವಾಲು ಹಿಡಿದು ನೂರಾರು ಜನ ಬರುತ್ತಾರೆ. ಕಚೇರಿ ಆವರಣವನ್ನು ಶುಚಿಯಾಗಿ ಇಡಬೇಕಾದವರು, ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿದಂತೆ ಕಾಣುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ, ಕಾವಲು ಸಿಬ್ಬಂದಿಯನ್ನು ನಿಯೋಜಿಸಿ, ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಅನ್ನೋದು ಸಾರ್ವಜನಿಕರ ಆಗ್ರಹ.

ಇದನ್ನೂ ಓದಿ: ವಾಯುವ್ಯ ಶಿಕ್ಷಕರ ಕ್ಷೇತ್ರದ ಮತ‌ ಎಣಿಕೆ: 2ನೇ ಸುತ್ತಿನಲ್ಲೂ ಹುಕ್ಕೇರಿ ಮುನ್ನಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.