ಕಲಬುರಗಿ: ರಾಜ್ಯದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿದ್ದ ಆಳಂದ ತಾಲೂಕಿನ ಅಪ್ರಾಪ್ತ ಬಾಲಕಿ ಮೇಲಿನ ಅತ್ಯಾಚಾರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇವಲ 9 ದಿನಗಳಲ್ಲಿ ಜಿಲ್ಲಾ ಪೊಲೀಸರು ಚಾರ್ಜ್‌ಸೀಟ್ ಸಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ನಗರದಲ್ಲಿಂದು ಮಾಹಿತಿ ನೀಡಿದ ಎಸ್ಪಿ ಇಶಾ ಪಂತ್, ಇದೆ ನ.01 ರಂದು ಘಟನೆ ನಡೆದಿತ್ತು. ನಂತರ ವಿಶೇಷ ತಂಡ ರಚನೆ ಮಾಡಿ ಕೇವಲ 24 ಗಂಟೆಯಲ್ಲಿ ಆರೋಪಿಯನ್ನ ಸೆರೆ ಹಿಡಿಯಲಾಗಿತ್ತು. ಆರೋಪಿ ಅಪ್ರಾಪ್ತನಾದ ಹಿನ್ನೆಲೆ ಬಾಲ ನ್ಯಾಯಮಂಡಳಿ ಅಧ್ಯಕ್ಷರ ಮುಂದೆ ಹಾಜರು ಪಡಿಸಲಾಗಿತ್ತು.
ಇದೀಗ ಕೇವಲ 9 ದಿನಗಳಲ್ಲಿ ಪ್ರಕರಣವನ್ನ ಎಲ್ಲ ಆಯಾಮಗಳಿಂದ ವೈಜ್ಞಾನಿಕ ರೀತಿಯಲ್ಲಿ ತನಿಖೆ ನಡೆಸಿ, ಕುರುಹಗಳನ್ನ ಪತ್ತೆಮಾಡಿ ಸೂಕ್ತ ಸಾಕ್ಷಾಧಾರ ಸಂಗ್ರಹಿಸಿ ಪೂರ್ಣವಾದ ವರದಿ ಬಾಲ ನ್ಯಾಯ ಮಂಡಳಿ ಅಧ್ಯಕ್ಷರಿಗೆ ಸಲ್ಲಿಕೆ ಮಾಡಲಾಗಿದೆ. ಜಿಲ್ಲಾ ಪೊಲೀಸರ ಕಾರ್ಯಕ್ಕೆ ಡಿಜಿ ಮತ್ತು ಐಜಿಪಿ ಅವರು ತನಿಖಾ ತಂಡಕ್ಕೆ ಒಂದು ಲಕ್ಷ ನಗದು ಬಹುಮಾನ ಘೋಷಿಸಿ ಶ್ಲಾಘಿಸಿದರು.
ಬಹುಮಾನದಲ್ಲಿ ಶೇ.50 ರಷ್ಟು ಭಾಗವನ್ನು ನೊಂದ ಬಾಲಕಿ ಕುಟುಂಬಸ್ಥರಿಗೆ ನೀಡಲು ತನಿಖಾ ತಂಡ ನಿರ್ಧರಿಸಿದೆ ಎಂದು ಎಸ್ಪಿ ಇಶಾ ಪಂತ್ ತಿಳಿಸಿದರು.
ಇದನ್ನೂ ಓದಿ: ಕಲಬುರಗಿ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ: ಅಪ್ರಾಪ್ತ ಆರೋಪಿ ಅರೆಸ್ಟ್