ಕಲಬುರಗಿ: ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಲ್ವಾರ್ ಪ್ರದರ್ಶನ ಮಾಡಿದಕ್ಕೆ ಶ್ರೀರಾಮ ಸೇನೆ ಕಿಡಿಕಾರಿದೆ. ಖರ್ಗೆ ವಿರುದ್ಧ ಕೇಸ್ ಹಾಕುವ ತಾಕತ್ತು ನಿಮಗಿದೆಯಾ? ಎಂದು ಪೊಲೀಸ್ ಇಲಾಖೆಗೆ ಶ್ರೀರಾಮ ಸೇನೆ ಪ್ರಶ್ನಿಸಿ ಕಿಚಾಯಿಸಿದೆ.
ನಗರದಲ್ಲಿ ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ 'ಕಲ್ಯಾಣ ಕ್ರಾಂತಿ' ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ವೇದಿಕೆ ಮೇಲೆ ತಲ್ವಾರ್ ಪ್ರದರ್ಶನ ಮಾಡಿದ್ದರು. ಇದನ್ನ ಗುರಿಯಾಗಿಸಿಕೊಂಡು ಶ್ರೀರಾಮ ಸೇನೆ ಮುಖಂಡ ಆಂದೋಲಾ ಶ್ರೀಗಳು ಪೊಲೀಸ್ ಇಲಾಖೆ ವಿರುದ್ಧ ತಮ್ಮ ಫೇಸ್ಬುಕ್ ಖಾತೆಯಲ್ಲಿ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಚ್ಚಾಟ ಬಿಟ್ಟು ಕಾಂಗ್ರೆಸ್ ಆಡಳಿತಕ್ಕೆ ತನ್ನಿ: ರಾಜ್ಯ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು
'ಎಲ್ಲಿದ್ದೀರಿ ಎಡಿಜಿಪಿ ಅಲೋಕ್ ಕುಮಾರ್ ಅವರೇ, 2017 ರಲ್ಲಿ ನಾವು ತಲ್ವಾರ್ ಹಿಡಿದಿದ್ದಕ್ಕಾಗಿ ಅಂದಿನ ಕಲಬುರಗಿ ಐಜಿಪಿಯಾಗಿದ್ದ ನೀವು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಸೇರಿ ನಮ್ಮ ಮೇಲೆ ಆರ್ಮ್ಸ್ ಆ‌್ಯಕ್ಟ್ ಅನ್ವಯ ಕೇಸ್ ಹಾಕಿದ್ರಿ. ಆದರೆ ಇಂದು ಅವರೇ ತಲ್ವಾರ್ ಪ್ರದರ್ಶನ ಮಾಡಿದ್ದಾರೆ. ಇವರ ಮೇಲೆ ಕೇಸ್ ಹಾಕುವ ತಾಕತ್ತು ಧಮ್ ಯಾವ ಅಧಿಕಾರಿಗಿದೆ? ಅವರಿಗೊಂದು, ನಮಗೊಂದು ನ್ಯಾಯವೇ? ಎಂದು ಪ್ರಶ್ನಿಸಿದ್ದಾರೆ.