ETV Bharat / state

ಕಲಬುರಗಿಯಲ್ಲಿ ವಕೀಲ ಕೊಲೆ ಪ್ರಕರಣ: ಮೂವರು ಆರೋಪಿಗಳ ಬಂಧನ

ವಕೀಲ ಈರಣ್ಣಗೌಡ ಪಾಟೀಲ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ವಿ.ವಿ.ಠಾಣೆಯ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳು
ಆರೋಪಿಗಳು
author img

By ETV Bharat Karnataka Team

Published : Dec 8, 2023, 8:10 PM IST

ನಗರ ಪೊಲೀಸ್ ಆಯುಕ್ತ ಚೇತನ್‌ ಆರ್ ಮಾಹಿತಿ ನೀಡಿದರು.

ಕಲಬುರಗಿ: ಗುರುವಾರ ನಡೆದ ವಕೀಲ ಈರಣ್ಣಗೌಡ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಮಲ್ಲಿನಾಥ್ ತಂದೆ ಬಸಣ್ಣ ಉದನೂರ್ (45), ಭಾಗಣ್ಣ ಅಲಿಯಾಸ್ ಭಗವಾನ್ ತಂದೆ ಅವಣಪ್ಪ ಉದನೂರ್ (20), ಅವಣಪ್ಪ ತಂದೆ ಭಾಗವಂತರಾವ್ ಉದನೂರ್ (48) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.‌

ಕೊಲೆ ಸಂಬಂಧ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ಘಟನೆ ನಡೆದ 24 ಗಂಟೆಯೊಳಗೆ ಮೂವರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ನಗರ ಪೊಲೀಸ್ ಆಯುಕ್ತರು ಎರಡು ವಿಶೇಷ ತಂಡ ರಚಿಸಿದ್ದರು.

ನಗರ ಪೊಲೀಸ್ ಆಯುಕ್ತ ಚೇತನ್‌ ಆರ್ ಮಾತನಾಡಿ, ''ವಕೀಲ ಈರಣ್ಣಗೌಡ ಪಾಟೀಲ್ ಎಂಬವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಮೃತರ ಸಂಬಂಧಿಕರು ನೀಡಿದ ದೂರಿನನ್ವಯ ವಿ.ವಿ.ಠಾಣೆಯಲ್ಲಿ ಸೆಕ್ಷನ್ 320/23, 143, 147,148, 120 ಡಿ, 302 ಐಪಿಸಿ ಅಡಿ ನಾವು ಕೇಸ್​ ದಾಖಲಿಸಿದ್ದೇವೆ. ಇದರಲ್ಲಿ ದೂರುದಾರರು ಸುಮಾರು ಏಳು ಜನ, ಅದರಲ್ಲಿ ಆರು ಜನ ಮತ್ತು ಇತರರು ಎಂದು ದೂರು ಕೊಟ್ಟಿದ್ದಾರೆ. ಈ ಸಂಬಂಧ ದೂರು ದಾಖಲು ಮಾಡಿಕೊಂಡು ತಕ್ಷಣ ಯೂನಿವರ್ಸಿಟಿ ಪೊಲೀಸರು ತನಿಖೆ ಕೈಗೊಂಡರು. ಇಂದು ಮೂವರು ಆರೋಪಿಗಳನ್ನು ಅರೆಸ್ಟ್​ ಮಾಡಿದ್ದೇವೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನಂತರ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡಬೇಕಾಗುತ್ತದೆ. ಮೇಲ್ನೋಟಕ್ಕೆ ಮೃತಪಟ್ಟಿರುವ ಈರಣ್ಣ ಗೌಡ ಅವರಿಗೂ ಹಾಗೂ ಅವರ ತಂದೆ ಮತ್ತು ಕೆಲವು ಸಂಬಂಧಿಕರ ನಡುವೆ ಸ್ವಲ್ಪ ಜಮೀನು ವ್ಯಾಜ್ಯ ಇತ್ತು. ಆದರೆ ಕೊಲೆಗೆ ನಿಖರ ಕಾರಣ ಏನೆಂಬುದು ತನಿಖೆಯ ನಂತರ ಗೊತ್ತಾಗಲಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಹಾಡಹಗಲೇ ಲಾಯರ್​ ಬರ್ಬರ ಕೊಲೆ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.