ETV Bharat / state

ಜಿಲ್ಲಾಡಳಿತದ ಮನವಿಗೆ ಸ್ಪಂದಿಸಿದ ACC ಸಿಮೆಂಟ್​ ಕಂಪನಿ: 70 ಜಂಬೋ ಸಿಲಿಂಡರ್ ಪೂರೈಕೆ - ಜಿಲ್ಲಾಡಳಿತದ ಮನವಿಗೆ ಸ್ಪಂಧಿಸಿದ ACC ಸಿಮೆಂಟ್​ ಕಂಪನಿ 70 ಜಂಬೂ ಸಿಲಿಂಡರ್ ಪೂರೈಕೆ

ಜಿಲ್ಲೆಯಲ್ಲಿ ಆಕ್ಸಿಜನ್ ಕೊರೆತೆಯಿಂದಾಗಿ ಪ್ರತಿನಿತ್ಯ ಹಲವು ಸೋಂಕಿತರು ಮೃತಪಡುತ್ತಿದ್ದು, ಆಕ್ಸಿಜನ್ ಕೊರೆತೆ ಸರಿದೂಗಿಸುವ ಹಿನ್ನೆಲೆ ಎಸಿಸಿ ಸಿಮೆಂಟ್ ಕಂಪನಿಯಿಂದ 70ಕ್ಕೂ ಅಧಿಕ ಜಂಬೋ ಸಿಲಿಂಡರ್ ಪೂರೈಕೆ ಮಾಡಲಾಗಿದೆ.

70 ಜಂಬೂ ಸಿಲಿಂಡರ್ ಪೂರೈಕೆ
70 ಜಂಬೂ ಸಿಲಿಂಡರ್ ಪೂರೈಕೆ
author img

By

Published : May 8, 2021, 9:21 AM IST

ಕಲಬುರಗಿ: ಸದಾ ವಿವಾದದ ಮೂಲಕ ಸುದ್ದಿಯಾಗುತ್ತಿದ್ದ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಎಸಿಸಿ ಸಿಮೆಂಟ್ ಕಂಪನಿ ಇದೀಗ ಕೊರೊನಾ ಸೊಂಕಿತರಿಗೆ ಜಂಬೋ ಸಿಲಿಂಡರ್ ಪೂರೈಕೆ ಮಾಡುವ ಮೂಲಕ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದೆ.

70 ಜಂಬೋ ಸಿಲಿಂಡರ್ ಪೂರೈಕೆ

ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಹೆಚ್ಚಾದ ಹಿನ್ನೆಲೆ ವಾಡಿ ಪಟ್ಟಣದಲ್ಲಿರುವ ಎಸಿಸಿ ಸಿಮೆಂಟ್ ಕಂಪನಿಯ ಅಧಿಕಾರಿಗಳು ಸಿಲಿಂಡರ್ ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯಲ್ಲಿ ಆಕ್ಸಿಜನ್ ಕೊರೆತೆಯಿಂದಾಗಿ ಪ್ರತಿನಿತ್ಯ ಹಲವು ಸೋಂಕಿತರು ಮೃತಪಡುತ್ತಿದ್ದು, ಆಕ್ಸಿಜನ್ ಕೊರೆತೆ ಸರಿದೂಗಿಸುವ ಹಿನ್ನೆಲೆ ಎಸಿಸಿ ಸಿಮೆಂಟ್ ಕಂಪನಿಯಿಂದ 70ಕ್ಕೂ ಅಧಿಕ ಜಂಬೋ ಸಿಲಿಂಡರ್ ಪೂರೈಕೆ ಮಾಡಲಾಗಿದೆ. ಕಂಪನಿ ಆಡಳಿತ ಮಂಡಳಿ ವಾಡಿ ಠಾಣೆ ಪೊಲೀಸರ ಮೂಲಕ ಜಿಲ್ಲಾಡಳಿತಕ್ಕೆ ಸಿಲಿಂಡರ್​ಗಳನ್ನು ಹಸ್ತಾಂತರ ಮಾಡಿದೆ. ಪೊಲೀಸರು ಭದ್ರತೆಯಲ್ಲಿ ಸಿಲಿಂಡರ್‌ಗಳನ್ನ ಕಲಬುರಗಿ ಜಿಮ್ಸ್‌‌ಗೆ ರವಾನಿಸಿದ್ದಾರೆ‌.

ಆಕ್ಸಿಜನ್ ಕೊರತೆಯಿಂದಾಗಿ ಹೆಮ್ಮಾರಿ ಕೊರೊನಾಗೆ ಹಲವಾರು ಜನರು ತಮ್ಮ ‌ಜೀವವನ್ನು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಜಿಲ್ಲಾಡಳಿತ ಜಿಲ್ಲೆಯಲ್ಲಿರುವ ಸಿಮೆಂಟ್ ಕಾರ್ಖಾನೆಗಳಿಗೆ ಸಿಲಿಂಡರ್ ಒದಗಿಸುವಂತೆ ಸೂಚಿಸಿದ್ದು, ಈ ಹಿನ್ನೆಲೆ ವಾಡಿ ಎಸಿಸಿ ಸಿಮೆಂಟ್ ಕಾರ್ಖಾನೆ ಅತಿ ಹೆಚ್ಚು ಸಿಲಿಂಡರ್ ನೀಡುವ ಮೂಲಕ ಪ್ರಶಂಸೆಗೆ ಪಾತ್ರವಾಗಿದೆ.

ಓದಿ : ಕೊರೊನಾ ಸೋಂಕಿತರಿಗೆ ಉಚಿತ ಊಟ.. ಹಸಿವು ನೀಗಿಸುವ ಯುವ ಬ್ರಿಗೇಡ್ ಕಾರ್ಯಕ್ಕೆ ಸಲಾಂ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.