ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ನೇಲೋಗಿ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ನಿಂತಿದ್ದ ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವಿಜಯಪುರ ಜಿಲ್ಲೆಯ ಸಿಂದಗಿ ಸಿಪಿಐ ಹಾಗೂ ಅವರ ಪತ್ನಿ ಮೃತಪಟ್ಟಿದ್ದಾರೆ.
ರವಿ ಉಕ್ಕುಂದ (43) ಹಾಗೂ ಪತ್ನಿ ಮಧು (40) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಸಿಂದಗಿಯಿಂದ ಕಲಬುರಗಿ ನಗರಕ್ಕೆ ಸಿಪಿಐ ದಂಪತಿ ಆಗಮಿಸುತ್ತಿದ್ದರು. ಕಂಟೇನರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಡಿಜಿಪಿ ಸಂತಾಪ: ಸಿಪಿಐ ರವಿ ಉಕ್ಕುಂದ ಹಾಗೂ ಮಧು ಉಕ್ಕುಂದ ಅವರ ಸಾವಿಗೆ ಎಡಿಜಿಪಿ ಅಲೋಕ ಕುಮಾರ್ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ರವಿ ಉಕ್ಕುಂದ ಪಿಎಸ್ಐ ಆಗಿ ನನ್ನ ಜೊತೆ ಸೇವೆ ಸಲ್ಲಿಸಿದ್ದರು. ರವಿ ಹಾಗೂ ಅವರ ಪತ್ನಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾಥಿಸಿದ್ದಾರೆ.
-
It’s really sad to see precious lives being lost in traffic accidents everyday
— alok kumar (@alokkumar6994) December 7, 2022 " class="align-text-top noRightClick twitterSection" data="
RIP Sindagi PI Ravi and Mrs Ravi
Ravi worked with me as PSI
Plz don’t shorten your life by driving in unsafe manner https://t.co/pnfpAs1IFt
">It’s really sad to see precious lives being lost in traffic accidents everyday
— alok kumar (@alokkumar6994) December 7, 2022
RIP Sindagi PI Ravi and Mrs Ravi
Ravi worked with me as PSI
Plz don’t shorten your life by driving in unsafe manner https://t.co/pnfpAs1IFtIt’s really sad to see precious lives being lost in traffic accidents everyday
— alok kumar (@alokkumar6994) December 7, 2022
RIP Sindagi PI Ravi and Mrs Ravi
Ravi worked with me as PSI
Plz don’t shorten your life by driving in unsafe manner https://t.co/pnfpAs1IFt
ಪ್ರತಿನಿತ್ಯ ಹೆಚ್ಚಾಗುತ್ತಿರುವ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದನ್ನು ಕಂಡು ತುಂಬಾ ನೋವಾಗುತ್ತಿದೆ. ಪ್ರತಿಯೊಬ್ಬರು ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ ವಹಿಸಬೇಕು. ಬೇಜವಾಬ್ದಾರಿಯಿಂದ ಜೀವಕ್ಕೆ ತೊಂದರೆ ತಂದುಕೊಳ್ಳಬಾರದು ಎಂದು ಎಡಿಜಿಪಿ ಕಿವಿಮಾತು ನೀಡಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಹಳಿ ದಾಟುವಾಗ ಗೂಡ್ಸ್ ರೈಲಿಗೆ ಸಿಲುಕಿದ ತಾಯಿ-ಮಗ.. ಕೂದಲೆಳೆ ಅಂತರದಲ್ಲಿ ಪಾರು- ವಿಡಿಯೋ