ETV Bharat / state

ಕಲಬುರಗಿ: ಉಕ್ರೇನ್​ನಲ್ಲಿ ಸಿಲುಕಿಕೊಂಡಿರುವ ಐವರು ಎಂಬಿಬಿಎಸ್ ವಿದ್ಯಾರ್ಥಿಗಳು - ಉಕ್ರೇನ್​ನಲ್ಲಿ ಸಿಲುಕಿದ ಕಲಬುರಗಿಯ 5 ವಿದ್ಯಾರ್ಥಿಗಳು

ಉಕ್ರೇನ್ ‌ಮೇಲೆ ರಷ್ಯಾ ನಿರಂತರವಾಗಿ ಆಕ್ರಮಣ ನಡೆಸುತ್ತಿದ್ದು, ಕಲಬುರಗಿಯ ಐದು ಜನ ವಿದ್ಯಾರ್ಥಿಗಳು ಉಕ್ರೇನ್​ನಲ್ಲಿ ಸಿಲುಕಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಉಕ್ರೇನ್
ಉಕ್ರೇನ್
author img

By

Published : Feb 25, 2022, 4:03 PM IST

ಕಲಬುರಗಿ: ಉಕ್ರೇನ್​ನ ಕೀವ್ ಹಾಗೂ ಖಾರ್ವಿಕ್​ನಲ್ಲಿ ಕಲಬುರಗಿಯ ಐದು ಜನ ವಿದ್ಯಾರ್ಥಿಗಳು ಸಿಲುಕಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಕೀವ್​ನಲ್ಲಿ ಜೀವಿತಾ ಮತ್ತು ವಿದ್ಯಾಸಾಗರ ಎಂಬುವರು ಹಾಗೂ ಖಾರ್ವಿಕ್​ನಲ್ಲಿ ಮಲ್ಲಿನಾಥ್, ಶಶಾಂಕ್, ವಿದ್ಯಾಸಾಗಾರ್ ಎಂಬ ಮೂವರು ಸಿಲುಕಿಕೊಂಡಿದ್ದಾರೆ‌. ಈ ಐವರು ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಷ್ಯಾ - ಉಕ್ರೇನ್ ಯುದ್ಧ: ಟಾಪ್ 10 ಘಟನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ..

ಖಾರ್ವಿಕ್​ನಲ್ಲಿ ಈ ಮೂವರು ವಿದ್ಯಾರ್ಥಿಗಳು ಇರುವ ಪ್ರದೇಶದ ಕೂಗಳತೆ ದೂರದಲ್ಲೇ ಬಾಂಬ್ ಸ್ಫೋಟಗೊಂಡಿದ್ದು, ಸ್ಫೋಟದ ಶಬ್ದಕ್ಕೆ ವಿದ್ಯಾರ್ಥಿಗಳು ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲದೆ, ಹಾಸ್ಟೆಲ್​ನ ಕಿಟಕಿ ಗಾಜುಗಳು ಬಿರುಕುಗೊಂಡು ಕೊಣೆ ನಡುಗಿದ ಅನುಭವವಾಗಿದೆ.

ಹಾಸ್ಟೆಲ್ ನಡುಗಿದ ಅನುಭವವಾದ ಹಿನ್ನೆಲೆ ವಿದ್ಯಾರ್ಥಿಗಳನ್ನ ಬಾಂಬ್ ಶೆಲ್ಟರ್​ಗೆ ಶಿಫ್ಟ್ ಮಾಡಲಾಗಿದೆ. ಅಷ್ಟೇ ಅಲ್ಲದೆ, ಇದೇ ಹಾಸ್ಟೆಲ್​ನಲ್ಲಿ ಕರ್ನಾಟಕ ಮೂಲದ ಇನ್ನೂ 40 ವಿದ್ಯಾರ್ಥಿಗಳು ವಾಸವಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.