ETV Bharat / state

ನಾಯಿ ಕಡಿತ: ಚಿತ್ತಾಪುರದಲ್ಲಿ 30 ಕುರಿಗಳ ಸಾವು - 30 sheep died in chittapura

ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ನಿವಾಸಿ ಮಲ್ಲಿಕಾರ್ಜುನ ಭೀಮರಾಯ ಪೂಜಾರಿ ಎನ್ನುವವರಿಗೆ ಸೇರಿದ ಕುರಿಗಳ ಮೇಲೆ ನಾಯಿಗಳು ದಾಳಿ ನಡೆಸಿ ಕಚ್ಚಿದ್ದು, ಪರಿಣಾಮ 30 ಕುರಿಗಳು ಮೃತಪಟ್ಟಿವೆ.

30-sheep-died-by-dog-bite-in-chittapura
ಚಿತ್ತಾಪುರದಲ್ಲಿ 30 ಕುರಿಗಳು ಮೃತ
author img

By

Published : Jun 20, 2021, 8:08 PM IST

ಕಲಬುರಗಿ: ನಾಯಿ ಕಡಿತದಿಂದ ಸ್ಥಳದಲ್ಲೇ 30 ಕುರಿಗಳು ಮೃತಪಟ್ಟಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದಲ್ಲಿ ನಡೆದಿದೆ.

ರಾವೂರ ನಿವಾಸಿ ಮಲ್ಲಿಕಾರ್ಜುನ ಭೀಮರಾಯ ಪೂಜಾರಿ ಎನ್ನುವವರಿಗೆ ಸೇರಿದ ಕುರಿಗಳು ಬಲಿಯಾಗಿವೆ. ರವಿವಾರ ಮಧ್ಯಾಹ್ನ 3 ಗಂಟೆಗೆ ಈ ಅನಾಹುತ ಜರುಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನಾಯಿಗಳು ದಾಳಿ ನಡೆಸಿದ ಪರಿಣಾಮ 9 ದೊಡ್ಡ ಕುರಿಗಳು, 21 ಚಿಕ್ಕ ಕುರಿಗಳು ಬಲಿಯಾಗಿವೆ. ಅಂದಾಜು 2 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ವಾಡಿ ಪಿಎಸ್ಐ ವಿಜಯಕುಮಾರ ಭಾವಗಿ, ಪ್ರಭಾರಿ ಪಿಎಸ್​ಐ ದೇವಿಂದ್ರ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಬಸ್ ಸಂಚಾರಕ್ಕೆ ಸಕಲ ಸಿದ್ಧತೆ.. NWKSRTC ಎಂಡಿ ಕೃಷ್ಣ ವಾಜಪೇಯಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.