ETV Bharat / state

ಕಲಬುರಗಿಯಲ್ಲಿ ಮೂವರು ಬಲಿ, 144 ಜನರಿಗೆ ಕೋವಿಡ್​ ಸೋಂಕು

ಜಿಲ್ಲೆಯಲ್ಲಿ ಹೊಸದಾಗಿ 144 ಕೋವಿಡ್​ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಸದ್ಯ 2,394 ಸಕ್ರಿಯ ಪ್ರಕರಣಗಳಿವೆ.

144 new covid case in kalburagi
144 new covid case in kalburagi
author img

By

Published : Sep 16, 2020, 2:03 AM IST

ಕಲಬುರಗಿ: ಮಹಾಮಾರಿ ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿಂದು ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 248ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ ಹಾಗೂ ಅಸ್ತಮಾದಿಂದ ಬಳಲುತ್ತಿದ್ದ ಶಹಾಬಾದ್​ ಪಟ್ಟಣದ 49 ವರ್ಷದ ಪುರುಷ (P-382622) ಆಸ್ಪತ್ರೆಗೆ ದಾಖಲಾಗಿ ಸೆ.13 ರಂದು ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಸೇಡಂ ತಾಲೂಕಿನ ಕುರಕುಂಟಾ ಗ್ರಾಮದ 50 ವರ್ಷದ ಮಹಿಳೆ (P-438523) ಸೆ.12 ರಂದು ನಿಧನರಾಗಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಕ್ಷಯರೋಗದಿಂದ ಬಳಲುತ್ತಿದ್ದ ಸೇಡಂ ತಾಲೂಕಿನ ಲಿಂಗಂಪಲ್ಲಿ ಗ್ರಾಮದ 62 ವರ್ಷದ ವೃದ್ಧ (P-465216) ಸೆ.14 ರಂದು ನಿಧನರಾಗಿದ್ದಾರೆ.

ಇವರ ಮರಣೋತ್ತರ ತಪಾಸಣೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.ಇಂದು 144 ಜನರಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 14,760ಕ್ಕೆ ಏರಿಕೆಯಾಗಿದೆ. 87 ಜನ ಗುಣಮುಖರಾಗಿದ್ದು, ಇಲ್ಲಿಯವರೆಗೆ 12,118 ಜನರು ಗುಣಮುಖರಾದಂತಾಗಿದೆ. 2,394 ಆ್ಯಕ್ಟಿವ್​ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.