ETV Bharat / state

ಹಣದ ದಾಹಕ್ಕೆ ಮಹಿಳೆಯರ ಗರ್ಭಕೋಶ ಕತ್ತರಿಸಿದ ವೈದ್ಯ.. ಸಿಎಂ ಮನೆಗೆ ಪಾದಯಾತ್ರೆಗೆ ನಿರ್ಧರಿಸಿದ ಮಹಿಳೆಯರು - etv bharath kannada news

ರಾಣೆಬೆನ್ನೂರು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿದ್ದ ಪಿ. ಶಾಂತ ತಾಲೂಕಿನ ಸುಮಾರು 15 ನೂರಕ್ಕೂ ಅಧಿಕ ಮಹಿಳೆಯರ ಗರ್ಭಕೋಶ ಕತ್ತರಿಸಿ ಹಾಕಿದ್ದ. ಕಾರಣವಿಲ್ಲದೇ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಆರೋಗ್ಯದ ಹಲವು ಸಮಸ್ಯೆಗಳಿಗೆ ತುತ್ತಾಗಿದ್ದರು.

ಸಿಎಂ ಮನೆಗೆ ಪಾದಯಾತ್ರೆಗೆ ನಿರ್ಧರಿಸಿದ ಮಹಿಳೆಯರು

author img

By

Published : Sep 27, 2022, 10:22 PM IST

ಹಾವೇರಿ: ಸರ್ಕಾರಿ ವೈದ್ಯನ ಹಣದ ದಾಹಕ್ಕೆ ಗರ್ಭಕೋಶ ಕಳೆದುಕೊಂಡ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮದ ಮಹಿಳೆಯರು ಇದೀಗ ಮತ್ತೆ ಸಿಎಂ ಮನೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಈ ಕುರಿತಂತೆ ರಾಣೆಬೆನ್ನೂರಲ್ಲಿ ಸಭೆ ನಡೆಸಿದ ಮಹಿಳೆಯರು ಬರುವ ತಿಂಗಳು 17 ರಂದು ಸಿಎಂ ಶಿಗ್ಗಾಂವಿ ನಿವಾಸಕ್ಕೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ. ರಾಣೆಬೆನ್ನೂರು ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಪಿ ಶಾಂತ ತಾಲೂಕಿನ ಸುಮಾರು 15 ನೂರಕ್ಕೂ ಅಧಿಕ ಮಹಿಳೆಯರ ಗರ್ಭಕೋಶ ಕತ್ತರಿಸಿ ಹಾಕಿದ್ದ. ಕಾರಣವಿಲ್ಲದೇ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಆರೋಗ್ಯದ ಹಲವು ಸಮಸ್ಯೆಗಳಿಗೆ ತುತ್ತಾಗಿದ್ದರು. ತಮಗೆ ವಿಶೇಷ ಆರ್ಥಿಕ ಪ್ಯಾಕೇಜ್​ ನೀಡುವಂತೆ ಮಹಿಳೆಯರು ವಿವಿಧ ಸಂಘಟನೆಗಳ ಬೆಂಬಲದ ಮೇಲೆ ಪ್ರತಿಭಟನೆ ನಡೆಸಿದ್ದರು.

ರಾಣೆಬೆನ್ನೂರು ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಪಿ ಶಾಂತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಹಿಳೆಯರು

ಏಪ್ರಿಲ್​ 25 ರಂದು ರಾಣೆಬೆನ್ನೂರಿಂದ ಪಾದಯಾತ್ರೆ ಆರಂಭಿಸಿದ್ದರು. ಹಾವೇರಿ ಬಳಿ ಪಾದಯಾತ್ರೆ ತಡೆದ ಜಿಲ್ಲಾಡಳಿತ ಮಹಿಳೆಯರಿಗೆ ವಿಶೇಷ ಪ್ಯಾಕೇಜ್ ನೀಡುವ ಭರವಸೆ ನೀಡಿತ್ತು. ಅಲ್ಲದೇ ಮಹಿಳೆಯರನ್ನ ಸಿಎಂ ಹತ್ತಿರ ಕರೆದುಕೊಂಡು ಹೋಗಿ ಸಮಸ್ಯೆಯ ತೀವ್ರತೆ ತಿಳಿಸಿತ್ತು. ಆದರೆ ಜಿಲ್ಲಾಡಳಿತ ಸಿಎಂ ಭರವಸೆ ಭರವಸೆಯಾಗಿಯೇ ಉಳಿದಿದೆ. ಈ ಹಿನ್ನೆಲೆಯಲ್ಲಿ ಈ ಮಹಿಳೆಯರು ಆಕ್ಟೋಬರ್ 17 ರಂದು ತಾವು ಈ ಹಿಂದೆ ಪಾದಯಾತ್ರೆ ನಿಲ್ಲಿಸಿದ್ದ ಸ್ಥಳದಿಂದಲೇ ಸಿಎಂ ಮನೆಯವರೆಗೆ ಪಾದಯಾತ್ರೆ ಕೈಗೊಳ್ಳುವ ನಿರ್ಧಾರಕ್ಕೆ ಬಂದಿದ್ದಾರೆ.

ಓದಿ: ಪಿಎಫ್​ಐ ಮೇಲಿನ ರಾಜ್ಯ ಪೊಲೀಸರ ದಾಳಿಯ ಸತ್ಯಾಂಶ ಜನರ ಮುಂದೆ ಇಡಿ: ಹೆಚ್​ಡಿ ಕುಮಾರಸ್ವಾಮಿ ಆಗ್ರಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.