ETV Bharat / state

ಕಾಂಗ್ರೆಸ್​​ ಮಾಡುತ್ತಿರುವುದು ಭಾರತ ಜೋಡೋ ಅಲ್ಲ, ಅದು ಭಾರತ ತೋಡೋ: ನಳಿನ್​ ಕುಮಾರ್​ ಕಟೀಲ್ - ಭಾರತ ಜೋಡೋ

ರಾಹುಲ್ ಗಾಂಧಿ ಇವತ್ತು ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಅವರು ಮಾಜಿ ಪ್ರಧಾನಿ ಅಟಿಲ್ ಬಿಹಾರಿ ವಾಜಪೇಯಿ ನಿರ್ಮಾಣ ಮಾಡಿರುವ ರಸ್ತೆ ಮೇಲೆ ಮಾಡುತ್ತಿದ್ದಾರೆ. ಅವರು ಮಾಡುತ್ತಿರುವುದು ಭಾರತ ಜೋಡೋ ಅಲ್ಲ, ಅದು ಭಾರತ ತೋಡೋ. ಜನರು ಕಾಂಗ್ರೆಸ್‌ ತಿರಸ್ಕಾರ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲ್ ಹೇಳಿದ್ದಾರೆ.

ನಳಿನ್​ ಕುಮಾರ್​ ಕಟೀಲ್
ನಳಿನ್​ ಕುಮಾರ್​ ಕಟೀಲ್
author img

By

Published : Oct 11, 2022, 7:27 PM IST

Updated : Oct 11, 2022, 7:46 PM IST

ಹಾವೇರಿ: ರಾಜ್ಯದಲ್ಲಿ ಪ್ರತಿಪಕ್ಷನಾಯಕ ಸಿದ್ದರಾಮಣ್ಣ ಹಿಂದೆ ಟಿಪ್ಪುಜಯಂತಿ ಮಾಡಿ, ಹಿಂದೂ- ಮುಸ್ಲಿಮರನ್ನ ಒಡೆದರು. ವೀರಶೈವ - ಲಿಂಗಾಯತ ಸಮಾಜವನ್ನು ಒಡೆಯಲು ಪ್ರಯತ್ನಿಸಿದ್ದು, ಕಾಂಗ್ರೆಸ್ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲ್ ಆರೋಪಿಸಿದರು.

ಹಾವೇರಿಯಲ್ಲಿ ನಡೆದ ಪೇಜ್ ಪ್ರಮುಖರ ಮೇಲ್ಪಟ್ಟ ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಂಕಲ್ಪ ಸಭೆ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ಜೋಡಿಸುವ ಕೆಲಸ ಮಾಡುತ್ತಿದೆ. ರಾಹುಲ್ ಗಾಂಧಿ ಇವತ್ತು ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಅವರು ಮಾಜಿ ಪ್ರಧಾನಿ ಅಟಿಲ್ ಬಿಹಾರಿ ವಾಜಪೇಯಿ ನಿರ್ಮಾಣ ಮಾಡಿರುವ ರಸ್ತೆ ಮೇಲೆ, ಭಾರತ ಜೋಡೋ ಮಾಡುತ್ತಿದ್ದಾರೆ ಎಂದು ಕಟೀಲ್ ವ್ಯಂಗ್ಯವಾಡಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲ್

ಭಾರತ ತೋಡೋ ಯಾತ್ರೆ: ಕಾಂಗ್ರೆಸ್​​ನವರು ಗರೀಬಿ ಹಠಾವೋ ಎಂದರು ಜನ ಕಾಂಗ್ರೆಸ್ ಹಠಾವೋ, ಗಾಂಧಿ ಕುಟುಂಬ ಹಠಾವೋ ಅಂತಿದ್ದಾರೆ. ಕಾಂಗ್ರೆಸ್​ನವರು ಭಾರತ ಜೋಡೋ ನಾಟಕ ಪ್ರಾರಂಭ ಮಾಡಿದ್ದಾರೆ. ಅವರು ಮಾಡುತ್ತಿರುವುದು ಭಾರತ ಜೋಡೋ ಅಲ್ಲ, ಅದು ಭಾರತ ತೋಡೋ. ಜನರು ಕಾಂಗ್ರೆಸ್‌ ತಿರಸ್ಕಾರ ಮಾಡಿದ್ದಾರೆ. ಹೀಗಾಗಿ ಭಾರತ ಜೋಡೋ ನಾಟಕ ಶುರುಮಾಡಿದ್ದಾರೆ ಎಂದು ನಳಿನ್​ ಹೇಳಿದರು.

ಡಿಕೆಶಿಗೆ ಅಲ್ಲಿ ಟೆನ್ಷನ್ ಶುರು: ಜೋಡೋಗಳ ಮಧ್ಯ ಜಗಳಗಳು ಜಾಸ್ತಿ ಆಗ್ತಿವೆ. ರಾಹುಲ್ ಗಾಂಧಿ ಯಾತ್ರೆ ಪ್ರಾರಂಭವಾಗಿದೆ. ಸಿದ್ದರಾಮಣ್ಣ ಮತ್ತು ಡಿಕೆಶಿ ಜಗಳವೂ ಜೋರಾಗಿದೆ. ಡಿಕೆಶಿ ಮೀಟಿಂಗ್‌ಗೆ ಸಿದ್ದರಾಮಣ್ಣ ಹೋಗುವುದಿಲ್ಲ. ಸಿದ್ದರಾಮಣ್ಣ ಮೀಟಿಂಗ್‌ಗೆ ಡಿಕೆಶಿ ಹೋಗುವುದಿಲ್ಲ. ಪಾದಯಾತ್ರೆಯಲ್ಲಿ ಡಿಕೆಶಿ ದಿಲ್ಲಿಗೆ ಸಿದ್ದರಾಮಣ್ಣ ಗಲ್ಲಿಗೆ, ರಾಹುಲ್ ಗಾಂಧಿ ಕೈ ಹಿಡುಕೊಂಡು ಓಡ್ತಾರೆ. ಡಿಕೆಶಿಗೆ ಅಲ್ಲಿ ಟೆನ್ಷನ್ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ಸು; ಉತ್ಸಾಹದಿಂದ ಹೆಜ್ಜೆಹಾಕುತ್ತಿರುವ ನಾಯಕರು

ಚುನಾವಣೆ ಮುಂಚೆ ಕಾಂಗ್ರೆಸ್ ಎರಡು ಹೋಳಾಗುತ್ತದೆ. ಒಂದು ಸಿದ್ದರಾಮಣ್ಣ ಪಾರ್ಟಿ, ಮತ್ತೊಂದು ಡಿಕೆಶಿ ಪಾರ್ಟಿ, ಇನ್ನೊಂದು ಮೂರನೇಯ ಶಕ್ತಿ ಕೇಂದ್ರ ನಿರ್ಮಾಣ ಆಗುತ್ತಿದೆ. ಅದ್ಯಾವುದು ಅಂದ್ರೆ ಖರ್ಗೆ ಗ್ಯಾಂಗ್. ಖರ್ಗೆ ಅಧ್ಯಕ್ಷರಾದ ಮೇಲೆ ಸಿದ್ದರಾಮಣ್ಣನಿಗೆ ಕಾಂಗ್ರೆಸ್‌ನಲ್ಲಿ ಜಾಗವಿಲ್ಲ. ಯಾಕಂದ್ರೆ ಖರ್ಗೆ ಮುಖ್ಯಮಂತ್ರಿ ಮಾಡಲಿಕ್ಕೆ ಅಡ್ಡಗಾಲಿಟ್ಟು ಅವರನ್ನು ಸೋಲಿಸಿದ್ದವರೇ ಈ ಸಿದ್ದರಾಮಣ್ಣ ಎಂದು ಕಟೀಲ್ ಆರೋಪಿಸಿದರು.

ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಂಕಲ್ಪ ಸಭೆ
ಪದಾಧಿಕಾರಿ ಹಾಗೂ ಕಾರ್ಯಕರ್ತರ ಸಂಕಲ್ಪ ಸಭೆ

ಈ ಸಾರಿ ಖರ್ಗೆ ಸಿದ್ದರಾಮಣ್ಣನನ್ನು ಸೋಲಿಸುತ್ತಾರೆ. ಹಾಗಾಗಿ ಸಿದ್ದರಾಮಣ್ಣ ಕಾಡಿಗೆ, ಡಿಕೆಶಿ ಬಂಡೆ ಒಡೆಯಲಿಕ್ಕೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​​ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.

Last Updated : Oct 11, 2022, 7:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.