ETV Bharat / state

ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿ ಕುಕ್ಕರ್ ವಿತರಣೆ: ಬೈಚವಳ್ಳಿ ಗ್ರಾ.ಪಂ ವಿರುದ್ಧ ಆರೋಪ - Allegations against Baichavalli Gp

ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿ ಕುಕ್ಕರ್ ವಿತರಿಸಿದ ಆರೋಪ ಹಾನಗಲ್ ತಾಲೂಕು ಬೈಚವಳ್ಳಿ ಗ್ರಾಮ ಪಂಚಾಯತ್​ ವಿರುದ್ಧ ಕೇಳಿ ಬಂದಿದೆ.

ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿ ಕುಕ್ಕರ್ ವಿತರಣೆ

author img

By

Published : Oct 3, 2021, 4:40 PM IST

ಹಾವೇರಿ: ಹಾನಗಲ್ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿದೆ. ಆದರೆ ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿ ಕುಕ್ಕರ್ ವಿತರಿಸಿದ ಆರೋಪ ಹಾನಗಲ್ ತಾಲೂಕು ಬೈಚವಳ್ಳಿ ಗ್ರಾಮ ಪಂಚಾಯತ್​ ವಿರುದ್ಧ ಕೇಳಿ ಬಂದಿದೆ.

ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿ ಕುಕ್ಕರ್ ವಿತರಣೆ..

ಗ್ರಾಮ ಪಂಚಾಯತ್​ ಉಪಾಧ್ಯಕ್ಷೆ ಶೋಭಾ ಶನಿವಾರ ರಾತ್ರಿ ಕುಕ್ಕರ್ ವಿತರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗ್ರಾಮ ಪಂಚಾಯತ್​ ವ್ಯಾಪ್ತಿಗೆ ಬರುವ ವಿಕಲಚೇತನರಿಗೆ ಬಿಡುಗಡೆಯಾಗಿದ್ದ ಕುಕ್ಕರ್‌ಗಳನ್ನು ಶೋಭಾ ಮತ್ತು ಬೆಂಬಲಿಗರು ವಿತರಿಸಿದ್ದಾರೆ ಎನ್ನಲಾಗ್ತಿದೆ.

ಇದು ಚುನಾವಣಾ ನೀತಿ ಸಂಹಿತಿ ಉಲ್ಲಂಘನೆಯಾಗಿದ್ದು, ಚುನಾವಣಾಧಿಕಾರಿಗಳು ಶೋಭಾ ಮತ್ತು ಅವರ ಬೆಂಬಲಿಗರ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುಕ್ಕರ್‌ಗಳು ಚುನಾವಣಾ ನೀತಿ ಸಂಹಿತೆ ಪ್ರಕಟವಾಗುವ ಮುನ್ನವೇ ಗ್ರಾಮ ಪಂಚಾಯತ್​ ವ್ಯಾಪ್ತಿಯ ವಿಕಲಚೇತನರಿಗೆ ಬಿಡುಗಡೆಯಾಗಿದ್ದವು. ಮಾನವೀಯತೆ ದೃಷ್ಠಿಯಿಂದ ಕುಕ್ಕರ್ ವಿತರಿಸಿದ್ದೇವೆ. ನಾವು ಯಾವುದೇ ಪಕ್ಷಕ್ಕೆ ಮತ ಹಾಕಿ ಎಂದು ವಿತರಿಸಿಲ್ಲ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷ್ಯೆ ಶೋಭಾ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಭವಾನಿಪುರದಲ್ಲಿ ಸಿಎಂ ಬ್ಯಾನರ್ಜಿಗೆ ಭರ್ಜರಿ ಜಯ: ಶುಭಾಶಯ ಕೋರಿದ ಹೆಚ್​ಡಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.