ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷಗಳಿಂದ ಅಲ್ಟ್ರಾ ಸ್ಕ್ಯಾನಿಂಗ್ ಸೌಲಭ್ಯ ಇಲ್ಲದಂತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಅಲ್ಟ್ರಾ ಸ್ಕ್ಯಾನಿಂಗ್ ನಿರ್ವಹಣೆ ಮಾಡುವ ರೆಡಿಯಾಲಾಜಿಸ್ಟ್ ಇಲ್ಲದ ಕಾರಣ ಬಂದ್ ಮಾಡಲಾಗಿದೆ. ಪ್ರತಿನಿತ್ಯ ಜಿಲ್ಲಾಸ್ಪತ್ರೆಗೆ 80ರಿಂದ ನೂರು ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಾರೆ. ಇವರೆಲ್ಲ ನಗರದ ಇತರ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರುವ ಪರಿಸ್ಥಿತಿ ಇದೆ. ಮೊದಲೇ ಗರ್ಭಿಣಿಯರು ಅದರಲ್ಲಿ ಕಿ.ಮೀಗಟ್ಟಲೆ ಇರುವ ಸ್ಕ್ಯಾನಿಂಗ್ ಸೆಂಟರ್‌ಗೆ ತೆರಳಿ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿರುವುದು ಜಿಲ್ಲಾಸ್ಪತ್ರೆ ಅವಲಂಭಿಸಿರುವ ಬಡ ರೋಗಿಗಳಿಗೆ ಆರ್ಥಿಕ ಹೊರೆ ತಂದಿದೆ.
ಜಿಲ್ಲಾಸ್ಪತ್ರೆಗೆ ಪ್ರತಿನಿತ್ಯ ನೂರಾರು ಗರ್ಭಿಣಿಯರು ಚಿಕಿತ್ಸೆಗೆ ಬರುತ್ತಾರೆ. ಗರ್ಭಿಣಿಯರ ತಪಾಸಣೆಗೆ ಅವಶ್ಯಕವಾಗಿ ಬೇಕಿದ್ದ ಸ್ಕ್ಯಾನಿಂಗ್ ತಜ್ಞರು ಇಲ್ಲಿಲ್ಲ. ಕಳೆದ ಒಂದೂವರೆ ವರ್ಷದಿಂದ ತಜ್ಞರು ಇಲ್ಲದ ಕಾರಣ ಅಲ್ಟ್ರಾ ಸ್ಕ್ಯಾನಿಂಗ್ ವಿಭಾಗವನ್ನ ಬಂದ್ ಮಾಡಲಾಗಿದೆ. ಪರಿಣಾಮ ಇಲ್ಲಿಗೆ ಬರುವ ಬಡ ರೋಗಿಗಳು, ಗರ್ಭಿಣಿಯರು ಸ್ಕ್ಯಾನಿಂಗ್ ಮಾಡಿಸಬೇಕು ಅಂದರೆ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ತೆರಳಬೇಕು. ಜಿಲ್ಲಾಸ್ಪತ್ರೆಯಿಂದ ಕಿ.ಮೀ. ಅಂತರದಲ್ಲಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್‌ಗಳಿವೆ. ಗರ್ಭಿಣಿಯರು ಸ್ಕ್ಯಾನಿಂಗ್ ಸೆಂಟರ್ ಹುಡುಕಿಕೊಂಡು ಹೋಗಿ ಸಾವಿರಾರು ರೂಪಾಯಿ ನೀಡಿ ಸ್ಕ್ಯಾನಿಂಗ್ ಮಾಡಿಸಿಕೊಂಡು ಬರುವ ಸ್ಥಿತಿ ಇಲ್ಲಿದೆ.
ಆದರೆ ಈ ಕುರಿತಂತೆ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳು ಹೇಳುವುದೇ ಬೇರೆ. ಜಿಲ್ಲಾಸ್ಪತ್ರೆಯಲ್ಲಿ ಒಂದೂವರೆ ವರ್ಷಗಳಿಂದ ಅಲ್ಟ್ರಾ ಸ್ಕ್ಯಾನಿಂಗ್ ತಜ್ಞರ ಹುದ್ದೆ ಖಾಲಿ ಇದೆ. ಈ ಕುರಿತಂತೆ ಗುತ್ತಿಗೆ ಆಧಾರದ ಮೇಲೆ ತಜ್ಞರನ್ನ ಕರೆಯಲಾಗಿತ್ತು. ಆದರೆ ರೆಡಿಯಾಲಾಜಿಸ್ಟ್ ಬರದ ಕಾರಣ ಸ್ಕ್ಯಾನಿಂಗ್ ಬಂದ್ ಮಾಡಲಾಗಿತ್ತು. ಆದರೆ ಇದೀಗ ಶಾಶ್ವತ ಹುದ್ದೆಯಲ್ಲಿ ರೆಡಿಯಾಲಾಜಿಸ್ಟ್ ಸಿಕ್ಕಿದ್ದು, ಎಲ್ಲಾ ಪ್ರಕ್ರಿಯೆ ಮುಗಿಯಲು ಬಂದಿದೆ. ಬೆರಳೆಣಿಕೆ ದಿನಗಳಲ್ಲಿ ಸ್ಕ್ಯಾನಿಂಗ್ ಸೆಂಟರ್ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದ್ದಾರೆ.
ಜಿಲ್ಲಾಸ್ಪತ್ರೆಗೆ ಬರುವ ಗರ್ಭಿಣಿಯರು ಆಸ್ಪತ್ರೆಯಲ್ಲಿ ಯಾವಾಗ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಆರಂಭವಾಗುತ್ತದೆ ಎಂದು ಎದುರು ನೋಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಆದಷ್ಟು ಬೇಗ ಸ್ಕ್ಯಾನಿಂಗ್ ಸೆಂಟರ್ ಆರಂಭವಾಗಲಿ. ಗರ್ಭಿಣಿಯರು ಖಾಸಗಿ ಸೆಂಟರ್‌ಗಳಿಗೆ ತೆರಳುವ ಪ್ರಮೇಯ ಇಲ್ಲದಂತಾಗಲಿ. ಜೊತೆಗೆ ಬಡರೋಗಿಗಳ ಆರ್ಥಿಕ ಬವಣೆಯನ್ನ ಕಡಿಮೆ ಮಾಡಲಿ ಎನ್ನುತ್ತಿದ್ದಾರೆ ರೋಗಿಗಳ ಸಂಬಂಧಿಕರು.