ಹಾವೇರಿ : ಸವಣೂರು ಪಟ್ಟಣದ ಎಸ್. ಎಂ. ಕೃಷ್ಣ ನಗರದ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆ ಆಗಿರುವ ಹಿನ್ನೆಲೆ ಪಟ್ಟಣದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದು ಜನಸಂಚಾರ ವಿರಳವಾಗಿದೆ.
ಸೋಂಕಿತರು ವಾಸವಾಗಿದ್ದ ಪ್ರದೇಶವನ್ನ ಜಿಲ್ಲಾಡಳಿತ ಸಂಪೂರ್ಣ ಸೀಲ್ಡೌನ್ ಮಾಡಿದೆ. ಜೊತೆಗೆ ಈ ಪ್ರದೇಶದಲ್ಲಿ ಜಿಲ್ಲಾಡಳಿತ ಸ್ಥಳೀಯ ಆಡಳಿತದ ಮೂಲಕ ಜನರಿಗೆ ಬೇಕಾದ ತರಕಾರಿ ಮತ್ತು ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನ ಪೂರೈಕೆ ಮಾಡ್ತಿದೆ.
ಮುಂಬೈನಿಂದ ಬಂದಿದ್ದ ಇಬ್ಬರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದರಿಂದ ಜನರು ಮನೆಬಿಟ್ಟು ಹೊರಗೆ ಓಡಾಡ್ತಿಲ್ಲ. ಪಟ್ಟಣದಲ್ಲಿ ಬೀಡು ಬಿಟ್ಟಿರುವ ಪೊಲೀಸರು ಜನರಿಗೆ ಅನಗತ್ಯವಾಗಿ ಓಡಾಡದಂತೆ ತಿಳಿ ಹೇಳುತ್ತಿದ್ದಾರೆ.