ರಾಣೆಬೆನ್ನೂರು : ರಾಜಕಾರಣಿಗಳು, ವಿಜ್ಞಾನಿಗಳು, ವೈದ್ಯರು ಹೀಗೆ ಶಿಕ್ಷಕರು ಕಲಿಸಿದ ಶಿಕ್ಷಣದಿಂದ ದೊಡ್ಡ ಹುದ್ದೆ ಪಡೆಯುತ್ತಾರೆ ಎಂದು ತೋಟಗಾರಿಕೆ ಸಚಿವ ಆರ್ ಶಂಕರ್ ಹೇಳಿದರು.
ರಾಣೆಬೆನ್ನೂರ ನಗರದ ಸಿದ್ದೇಶ್ವರ ಸಭಾಭವನದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಮಾತೆ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿಯರ ಸಂಘದ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ಅಭಿನಂದನಾ ಸಮಾರಂಭ ಉದ್ಘಾಟಿಸಿದ ಮಾತನಾಡಿದ ಅವರು, ಶಿಕ್ಷಕರು ನೀಡಿದ ಪದಗಳಿಂದ ರಾಜಕೀಯ ಕ್ಷೇತ್ರ, ವಿಜ್ಞಾನ ಕ್ಷೇತ್ರ, ವೈದ್ಯಕೀಯ ಕ್ಷೇತ್ರದಲ್ಲಿ ಹಲವು ಮಹನೀಯರು ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಶಿಕ್ಷಕರ ಕೆಲಸ ಅಪಾರವಾಗಿದೆ. ಪ್ರತಿ ನಿತ್ಯವು ಮಕ್ಕಳಿಗೆ ಅಕ್ಷರ ನೀಡುವ ಮೂಲಕ ಶ್ರದ್ಧೆ, ಶಿಸ್ತು, ಸಂಸ್ಕೃತಿ ನೀಡುತ್ತಿದ್ದಾರೆ ಎಂದರು.
ಶಿಕ್ಷಣ ಕ್ಷೇತ್ರಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸರ್ಕಾರ ನೀಡುತ್ತಿದೆ. ಶಿಕ್ಷಕರ ವೇತನ, ಭತ್ಯೆ ಹೆಚ್ಚಿಗೆ ಮಾಡುವುದಕ್ಕೆ ಈಗಾಗಲೇ ವಿಧಾನಪರಿಷತ ಸಭಾಧ್ಯಕ್ಷ ಬಸವರಾಜ ಹೊರಟ್ಟಿಯವರು ಅವಲೋಕನ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ಜಿಪಂ ಸದಸ್ಯೆ ಮಂಗಳಗೌರಿ ಪೂಜಾರ, ಗದಿಗೆವ್ವ ದೇಸಾಯಿ ಹಾಜರಿದ್ದರು.