ಹಾವೇರಿ : ಯುಗಾದಿ ಹಬ್ಬದ ದಿನದಂದೇ ಮಗ ತಂದೆಯನ್ನ ಹತ್ಯಗೈದಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಹಾನಗಲ್ ತಾಲೂಕಿನ ಬಿಂಗಾಪುರದಲ್ಲಿ ಈ ಘಟನೆ ನಡೆದಿದೆ, ತಂದೆ ಮಗನ ನಡುವಿನ ವೈಮನಸ್ಸೇ ಘಟನೆಗೆ ಕಾರಣವೆಂದು ಹೇಳಲಾಗಿದೆ. ಯುಗಾದಿ ದಿನವಾದ ಶನಿವಾರ (ತಂದೆ ) ಮುರಳಿ ಮತ್ತು (ಮಗ) ಸಿದ್ದಪ್ಪ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿದೆ.
ಅರೋಪಿ ಸಿದ್ದಪ್ಪ ತಂದೆಯನ್ನ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಈ ಕುರಿತಂತೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.