ETV Bharat / state

ಹಾವೇರಿ: ರೈಲ್ವೆ ಅಂಡರ್ ಬ್ರಿಡ್ಜ್​ನಲ್ಲಿ ಸಿಲುಕಿದ್ದ ಆರು ಜನರ ರಕ್ಷಣೆ - Railway under Bridge

ರಾಣೆಬೆನ್ನೂರು ನಗರದಿಂದ ದೇವರಗುಡ್ಡವನ್ನು ಸಂಪರ್ಕಿಸುವ ರಸ್ತೆಯಲ್ಲಿನ ಕೆಳಸೇತುವೆ ನೀರಿನಲ್ಲಿ ಸಿಲುಕಿ ಪರದಾಡುತ್ತಿದ್ದ ಜನರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದರು.

Railway Bridge
Railway Bridge
author img

By

Published : May 6, 2022, 6:58 AM IST

ಹಾವೇರಿ: ರೈಲ್ವೆ ಅಂಡರ್ ಬ್ರಿಡ್ಜ್​ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ಆರು ಮಂದಿಯನ್ನು ತುರ್ತು ಸೇವಾ ಸಿಬ್ಬಂದಿ ರಕ್ಷಿಸಿರುವ ಘಟನೆ ರಾಣೆಬೆನ್ನೂರಿನಲ್ಲಿ ನಡೆದಿದೆ. ರಾಣೆಬೆನ್ನೂರು ನಗರದಿಂದ ದೇವರಗುಡ್ಡವನ್ನು ಸಂಪರ್ಕಿಸುವ ರಸ್ತೆಯಲ್ಲಿನ ಕೆಳಸೇತುವೆ ನೀರಿನಲ್ಲಿ ಎರಡು ವಾಹನಗಳು ಸಿಲುಕಿದ್ದವು. ಇದರಲ್ಲಿದ್ದ ಆರು ಜನ ರಕ್ಷಣೆಗಾಗಿ ಮೊರೆ ಇಟ್ಟಿದ್ದರು.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ನೀರಿನಲ್ಲಿ ಸಿಲುಕಿದ್ದವರನ್ನು ಕಾಪಾಡಿದರು. ಜೊತೆಗೆ, ನಗರಸಭೆ ಆಯುಕ್ತ ಉದಯಕುಮಾರ್ ಹಾಗೂ ನಗರಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನೀರಿನಲ್ಲಿ ಸಿಲುಕಿದ್ದ ವಾಹನಗಳನ್ನು ಜೆಸಿಬಿ ಮೂಲಕ ಹೊರತೆಗೆಯಲಾಗಿದೆ.

ಇದನ್ನೂ ಓದಿ: ಕೋವಿಡ್​ ಹಾವಳಿ ಮುಗಿದ ಬಳಿಕ ಸಿಎಎ ಅನುಷ್ಠಾನ ಖಚಿತ: ಕೇಂದ್ರ ಗೃಹ ಸಚಿವ ಅಮಿತ್ ಶಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.