ETV Bharat / state

ಹಾವೇರಿ ಪ್ರವಾಸಕ್ಕಾಗಿ ಬಂದಿದ್ದ ರಾಯಚೂರಿನ ಶಾಲಾ ಬಸ್​ ಪಲ್ಟಿ: ಮೂವರು ಮಕ್ಕಳು ಸೇರಿ ನಾಲ್ವರಿಗೆ ಗಾಯ - ವಿದ್ಯಾರ್ಥಿಗಳ ಶಾಲಾ ಬಸ್​ ಪಲ್ಟಿ

ಹಾವೇರಿಯಲ್ಲಿ ರಾಯಚೂರಿನ ಶಾಲಾ ಪ್ರವಾಸಿ ಬಸ್​ ಅಪಘಾತಕ್ಕೀಡಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಶಾಲಾ ವಿದ್ಯಾರ್ಥಿಗಳ ಬಸ್​ ಪಲ್ಟಿ
ಶಾಲಾ ವಿದ್ಯಾರ್ಥಿಗಳ ಬಸ್​ ಪಲ್ಟಿ
author img

By ETV Bharat Karnataka Team

Published : Dec 26, 2023, 10:02 AM IST

Updated : Dec 26, 2023, 8:17 PM IST

ಹಾವೇರಿ ಅಪಘಾತಕ್ಕೀಡಾದ ರಾಯಚೂರಿನ ಶಾಲಾ ಪ್ರವಾಸಿ ಬಸ್

ಹಾವೇರಿ: ರಾಯಚೂರಿನ ಶಾಲಾ ಪ್ರವಾಸಿ ಬಸ್​ ಪಲ್ಟಿಯಾಗಿ ಮೂವರು ವಿದ್ಯಾರ್ಥಿಗಳು, ಬಸ್​ ಚಾಲಕ ಗಂಭೀರವಾಗಿ ಗಾಯಗೊಂಡು, 12 ಮಕ್ಕಳಿಗೆ ಸಣ್ಣಪುಟ್ಟ ಗಾಯವಾದ ಘಟನೆ ಹಾವೇರಿ ಜಿಲ್ಲೆ‌ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್ ಬಳಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ನಡೆದಿದೆ. ಗಾಯಗೊಂಡವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತಕ್ಕೀಡಾದ ಶಾಲಾ ಪ್ರವಾಸಿ ಬಸ್​ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಸಜ್ಜನಗುಡ್ಡದ ಸರ್ಕಾರಿ ಶಾಲೆಗೆ ಸೇರಿದ್ದು ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಹಲವು ತಾಣಗಳಿಗೆ ಸಜ್ಜನಗುಡ್ಡದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಮಂಗಳವಾರ ಪ್ರವಾಸ ಕೈಗೊಂಡಿದ್ದರು. ಇಲ್ಲಿನ ಉತ್ಸವ ರಾಕ್​ಗಾರ್ಡ್​ಗೆ ತೆರಳುತ್ತಿದ್ದಾಗ ಸವಣೂರು ತಾಲೂಕಿನ ಅಲ್ಲಿಪುರ ಕ್ರಾಸ್​ ಬಳಿ ಎದುರಿಗೆ ಬಂದ ಕಾರನ್ನು ತಪ್ಪಿಸುವಾಗ ನಿಯಂತ್ರಣ ತಪ್ಪಿದ ಬಸ್​ ಉರುಳಿ ಬಿದ್ದಿದೆ.

ಈ ವೇಳೆ ಬಸ್​​​​ನಲ್ಲಿ 53 ವಿದ್ಯಾರ್ಥಿಗಳು, 6 ಶಿಕ್ಷಕರು ಇದ್ದರು. ಘಟನೆಯಲ್ಲಿ ಬಸ್​ ಚಾಲಕ ಮತ್ತು ಮೂವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ರವಾನಿಸಲಾಯಿತು. 12 ಮಕ್ಕಳು ಸಣ್ಣಪುಟ್ಟ ಗಾಯಗೊಂಡಿದ್ದು, ಅವರಿಗೆ ಸವಣೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮಕ್ಕಳಿಗೆ ಸ್ಥಳೀಯ ಶಾಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ಸ್ಥಳಕ್ಕೆ ಸವಣೂರು ಉಪವಿಭಾಗಾಧಿಕಾರಿ, ತಹಶೀಲ್ದಾರ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಒಂದು ದಿನದ ಶಾಲಾ ಶೈಕ್ಷಣಿಕ ಪ್ರವಾಸಕ್ಕಾಗಿ ಸೋಮವಾರ ರಾತ್ರಿ 11ರ ಸುಮಾರಿಗೆ ಸಜ್ಜಲಗುಡ್ಡದಿಂದ ಹಾವೇರಿಯ ಅಗಡಿ ತೋಟ ಸೇರಿದಂತೆ ವಿವಿಧ ಪ್ರವಾಸಿ ತಾಣಗಳ ವೀಕ್ಷಣೆಗೆ ಹೊರಟಿದ್ದೆವು. ಸವಣೂರು ಸಮೀಪದ ಅಲ್ಲಿಪುರ ಕ್ರಾಸ್ ಬಳಿ ಮುಂಜಾನೆ 6 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಬರುತ್ತಿದ್ದ ಕಾರ್ ತಪ್ಪಿಸಲು ಹೋದ ಚಾಲಕ ನಿಯಂತ್ರಿಸಲಾಗದೆ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಸವಣೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶಿಕ್ಷಕ ಅಮರೇಶ್​ ಮಾಹಿತಿ ನೀಡಿದ್ದಾರೆ.

ರಾತ್ರಿ ಊರಿಂದ ಪ್ರವಾಸ ಆರಂಭಿಸಿದೆವು. ಮುಂಜಾನೆ ಎದುರಿನಿಂದ ಬಂದ ಕಾರು ತಪ್ಪಿಸಲು ಹೋಗಿ ಕರೆಂಟ್​ ಕಂಬಕ್ಕೆ ಬಸ್​​ ಗುದ್ದಿದೆ. ಬಸ್​ ಪಲ್ಟಿಯಾಗಿ ಶಾಲಾ ಮಕ್ಕಳಿಗೆ ಗಾಯಗಳಾಗಿದೆ. ನಮ್ಮ ಮಕ್ಕಳಿಗೆ ಗಾಯವಾಗಿರುವುದು ಬೇಸರ ತಂದಿದೆ ಎಂದು ಶಿಕ್ಷಕಿ ಅನಲಾಯಿ ಬ್ಯಾಳಿ ತಿಳಿಸಿದರು.

ಇದನ್ನೂ ಓದಿ: ಯುವತಿ ತಂದೆ ಮೇಲೆ ಕಾರು ಹತ್ತಿಸಿ ಪರಾರಿಯಾದ ನವವಿವಾಹಿತೆಯ ಮಾಜಿ ಪ್ರಿಯಕರ

Last Updated : Dec 26, 2023, 8:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.