ETV Bharat / state

ಬಿಜೆಪಿ ಜನಸಂಕಲ್ಪ ಯಾತ್ರೆಗಿಂತ ಕ್ಷಮೆಯಾತ್ರೆ ಮಾಡಬೇಕು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್

ಬಿಜೆಪಿ ಜನಸಂಕಲ್ಪ ಯಾತ್ರೆಗಿಂತ ಕ್ಷಮೆಯಾತ್ರೆ ಮಾಡಿ ಜನರ ಬಳಿ ಹೋಗಿ ಕ್ಷಮೆ ಕೋರುಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

Kn_hvr_0
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್
author img

By

Published : Nov 7, 2022, 6:51 PM IST

ಹಾವೇರಿ: ಬಿಜೆಪಿ ಜನಸಂಕಲ್ಪ ಯಾತ್ರೆ ಬದಲು ಹಣ ಸಂಗ್ರಹ ಮಾಡುವ ಯಾತ್ರೆ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆರೋಪಿಸಿದ್ದಾರೆ. ಹಾವೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರಿಗೆ ಈಗ ಜನರ ಬಳಿ ಹೋಗಬೇಕು ಎಂಬುವ ಜ್ಞಾನೋದಯವಾಗಿದೆ. ಬಿಜೆಪಿ ಜನಸಂಕಲ್ಪ ಯಾತ್ರೆಗಿಂತ ಕ್ಷಮೆಯಾತ್ರೆ ಮಾಡಿ ಜನರ ಬಳಿ ಹೋಗಿ ಕ್ಷಮೆ ಕೋರುಬೇಕು.

ರಾಜ್ಯದ ಜನರು ಬಿಜೆಪಿಯ ಸರ್ಕಾರದಿಂದ ಭ್ರಮನಿರಶನಾಗಿದ್ದು, ಬದಲಾವಣಿ ಬಯಸಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುತ್ತಿರುವ ಬಿಜೆಪಿ ನಾಯಕರಿಗೆ ನಾಚಿಕೆ ಆಗಬೇಕು. ಈಗ ನಿಮ್ಮ ಸರ್ಕಾರವಿದೆ ಅದನ್ನ ಸಿಬಿಐ ಅಥವಾ ಯಾವುದಾದರೂ ತನಿಖಾ ಸಂಸ್ಥೆಯಿಂದ ತನಿಖೆ ಮಾಡಿಸಲಿ ಎಂದು ಅಹ್ಮದ್ ತಿಳಿಸಿದರು.

ಬಿಜೆಪಿ ಸರ್ಕಾರದ 40 ಪರ್ಸೆಂಟ್ ವಿಚಾರ ದೇಶಕ್ಕೆ ಗೊತ್ತಾಗಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ಗುತ್ತಿಗೆ ಸಂಘದವರು ಪತ್ರ ಬರೆದರೆ ಅದಕ್ಕೆ ಒಂದು ಉತ್ತರವಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಇನ್ನು ಪಕ್ಷದ ಟಿಕೆಟ್ ಅಕಾಂಕ್ಷಿಗಳ ಹತ್ತಿರ ಎರಡು ಲಕ್ಷ ರೂಪಾಯಿ ಕಟ್ಟಡಕ್ಕಾಗಿ ಕಲೆಕ್ಟ್ ಮಾಡುತ್ತಿದ್ದೇವೆ.

ಈಗಾಗಲೇ ಮಾಡಿರುವ ಸರ್ವೆ ಪ್ರಕಾರ ರಾಜ್ಯದಲ್ಲಿ ಸಾವಿರಕ್ಕಿಂತ ಅಧಿಕ ಆಕಾಂಕ್ಷಿ ಅಭ್ಯರ್ಥಿಗಳಿದ್ದಾರೆ ಎಂದರು. ಜೆಡಿಎಸ್‌ನವರು ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲ್ಲಲು ಅಲ್ಪಸಂಖ್ಯಾತರನ್ನ ಅಭ್ಯರ್ಥಿಯಾಗಿ ಹಾಕಿದ್ದರು. ಇನ್ನು ಕೆಲವು ದಿನ ನೋಡಿ ಬಿಜೆಪಿಯ ಜೆಡಿಎಸ್‌ನ ಯಾವೆಲ್ಲ ನಾಯಕರು ಕಾಂಗ್ರೆಸ್‌ಗೆ ಬರ್ತಾರೆ ಎಂದು ಹೇಳಿದರು.

ಬಿಜೆಪಿ ವಿರುದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿಕೆ

ಮಲ್ಲಿಕಾರ್ಜುನ್​ ಖರ್ಗೆ ಎಐಸಿಸಿ ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ಆನೆಬಲ ಬಂದಂತಾಗಿದೆ, ಬಿಜೆಪಿಯವರು ತಾಯಿ ಮಕ್ಕಳ ಪಕ್ಷ ಎಂಬ ಆರೋಪಕ್ಕೆ ತಕ್ಕ ಉತ್ತರ ನೀಡಿದಂತಾಗಿದೆ. ಬಿಜೆಪಿಯವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದರೆ. ರಾಹುಲ್ ಗಾಂಧಿ ಸಮಾಜ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಅಧಿಕಾರಕ್ಕಿಂತ ದೇಶ ದೊಡ್ಡದು ಎನ್ನುವ ನಿಟ್ಟಿನಲ್ಲಿ ಭಾರತ ಜೋಡೋ ಯಾತ್ರೆ ನಡೆಯುತ್ತಿದೆ.

ರಾಹುಲ್ ಗಾಂಧಿ ಯಾವುದೇ ಅಧಿಕಾರ ಹೊಂದದೆ ಪಕ್ಷದ ಒಬ್ಬ ಕಾರ್ಯಕರ್ತ, ಸಂಸದನಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಹಿಂದೆ ಯಾರು ಈ ರೀತಿ ಪಾದಯಾತ್ರೆ ಮಾಡಿರಲಿಲ್ಲಾ ಮುಂದೆಯೂ ಮಾಡುವದಿಲ್ಲಾ. ಪಕ್ಷ ಈಗಾಗಲೇ ಮೂರು ಸರ್ವೆ ಮಾಡಿದೆ. ಚುನಾವಣೆಯಲ್ಲಿ ಗೆಲ್ಲುವ ಮಾನದಂಡದ ಮೇಲೆ ಅರ್ಜಿ ಆಹ್ವಾನ ಮಾಡಿದ್ದೇವೆ ಡಿಸೆಂಬರ್ ಅಂತ್ಯದೊಳಗೆ 150 ಅಭ್ಯರ್ಥಿಗಳ ಹೆಸರು ಅಂತಿಮ ಮಾಡುವುದಾಗಿ ಸಲೀಂ ಅಹ್ಮದ್ ತಿಳಿಸಿದರು.

ಅಂತರಿಕ ಸರ್ವೆ ಪ್ರಕಾರ ಕಾಂಗ್ರೆಸ್ ಈಗಾಗಲೇ 130 ಕ್ಷೇತ್ರಗಳಲ್ಲಿ ಮುಂದಿದೆ. ಆದರೆ, ನಮ್ಮ ಗುರಿ 150. ಪ್ರಸ್ತುತ ಕಾಂಗ್ರೆಸ್​​ ಪಕ್ಷ ರಾಜ್ಯ ಸರ್ಕಾರದ ವೈಪಲ್ಯಗಳನ್ನ ಜನರ ಮುಂದಿಡುವ ಕೆಲಸವನ್ನ ಮಾಡುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಪಾಪದ ಕೊಡ ತುಂಬಿದೆ ಎಂದು ಸಲೀಂ ಅಹ್ಮದ್ ಆರೋಪಿಸಿದರು.

ಇದನ್ನೂ ಓದಿ: ಚಂದ್ರು ಕೇಸ್​​ನಲ್ಲಿ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ : ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.