ETV Bharat / state

ಮತದಾರ ಜಾಗೃತಿಗೆ ಮುಂದಿನ ವರ್ಷ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ: ಎಸ್.ಆರ್.ಹಿರೇಮಠ - Social Transformation Satyagraha Yatra

ರಾಜಕೀಯ ಪಕ್ಷಗಳ ನಾಯಕರು ನಾಚಿಕೆ, ಮಾನ, ಮಾರ್ಯಾದೆ ಬಿಟ್ಟಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ರಾಜಕೀಯ ನಾಯಕರು ಉತ್ತಮರಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದರು.

hiremath
ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ
author img

By

Published : Nov 13, 2022, 9:23 AM IST

Updated : Nov 13, 2022, 9:57 AM IST

ಹಾವೇರಿ: ಪ್ರಸ್ತುತ ಸನ್ನಿವೇಶ ನೋಡಿದ್ರೆ ದೇಶಕ್ಕೆ ಜನಪರ ರಾಜಕಾರಣದ ಅವಶ್ಯಕತೆ ಇದೆ. ಸಂವಿಧಾನದ ಚೌಕಟ್ಟಿನಲ್ಲಿ ನಡೆಯುವ ರಾಜಕಾರಣ, ಸಂವಿಧಾನ ಸಂಸ್ಥೆಗಳ ಸಂರಕ್ಷಣಾ ರಾಜಕಾರಣ ಬೇಕು ಎಂದು ಎಸ್ ಆರ್ ಹಿರೇಮಠ ಅಭಿಪ್ರಾಯಪಟ್ಟರು. ಮತದಾರರನ್ನು ಜಾಗೃತಗೊಳಿಸಲು ರಾಜ್ಯದಲ್ಲಿ ಮುಂದಿನ ವರ್ಷ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ನಡೆಸಲಾಗುತ್ತದೆ ಎಂದೂ ಅವರು ಪ್ರಕಟಿಸಿದರು.

ಹಾವೇರಿಯಲ್ಲಿ ಮಾತನಾಡಿದ ಅವರು, ಎಲ್ಲಿಯವರೆಗೆ ಪ್ರಜೆಗಳು ಸುಧಾರಿಸುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯ ಸ್ಥಿತಿಯೂ ಸಹ ಇದೇ ರೀತಿ ಇರುತ್ತದೆ. ಮತದಾರರು ಜಾಗರೂಕರಾಗಬೇಕು. ರಾಜಕೀಯ ಪಕ್ಷಗಳ ನಾಯಕರು ನಾಚಿಕೆ, ಮಾನ, ಮರ್ಯಾದೆ ಬಿಟ್ಟಿದ್ದಾರೆ. ಕೇವಲ ಬೆರಳೆಣಿಕೆಯಷ್ಟು ಮಂದಿ ಉತ್ತಮರಿದ್ದಾರೆ. ದೇಶ ಗಂಭೀರ ಪರಿಸ್ಥಿತಿಯಲ್ಲಿದ್ದು, ಇದಕ್ಕೆ ರಾಜಕೀಯ ಪಕ್ಷಗಳ ಮನಸ್ಥಿತಿಯೇ ಕಾರಣ ಎಂದರು.

ಹಾವೇರಿಯಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಎಸ್ ಆರ್ ಹಿರೇಮಠ

ಇದನ್ನೂ ಓದಿ: ಸ್ವಾಮಿಗಳು ಹಾಗೂ ರಾಜಕಾರಣಿಗಳ ನಡುವೆ ಅಪವಿತ್ರ ಮೈತ್ರಿ: ಎಸ್​ಆರ್​ ಹಿರೇಮಠ ಕಿಡಿ

ದೇಶದಲ್ಲಿ ಪ್ರಧಾನಿ ಸೇರಿದಂತೆ ಪ್ರಮುಖ ನಾಯಕರ ಆಯ್ಕೆಯನ್ನು ಬಂಡವಾಳಶಾಹಿಗಳು ಮಾಡುತ್ತಿದ್ದಾರೆ. ರಾಜಕೀಯ ಪಕ್ಷಗಳ ಚುನಾವಣೆಗೆ ಯಾರು ಹಣ ನೀಡುತ್ತಾರೋ ಅವರ ಕಡೆ ರಾಜಕೀಯ ನೇತಾರರು, ಸರ್ಕಾರಗಳಿವೆ. ದೇಶದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ಬದಲು ಜಾತಿ ಜಾತಿಗಳ ನಡುವೆ ವಿಷಬೀಜ ಬಿತ್ತುತ್ತಿದ್ದಾರೆ. ಯಾವ ರಾಜಕೀಯ ಪಕ್ಷದಲ್ಲಿಯೂ ಸಹ ನೈತಿಕತೆ ಇಲ್ಲ. ಸಂವಿಧಾನದ ಸ್ವಾಯತ್ತ ಸಂಸ್ಥೆಗಳನ್ನು ಸರ್ಕಾರಗಳು ತಮಗೆ ಬೇಕಾದ ರೀತಿಯಲ್ಲಿ ಬಳಕೆ ಮಾಡುತ್ತಿವೆ. ದೇಶದ ನಿಜವಾದ ಮಾಲೀಕರಾದ ಪ್ರಜೆಗಳು ಎಲ್ಲಿಯವರೆಗೆ ಎದ್ದು ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ಈ ವ್ಯವಸ್ಥೆ ಸರಿಯಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕರ್ನಾಟಕದ ಹೈಕೋರ್ಟ್ ಪೀಠ ಐತಿಹಾಸಿಕ ತೀರ್ಪು ಕೊಟ್ಟಿದೆ.. ಹಿರೇಮಠ

ನಲವತ್ತು ಸಾವಿರ ಕೋಟಿ ರೂಪಾಯಿ ಆಸ್ತಿ ಹೊಂದಿದ ಜನಾರ್ದನ ರೆಡ್ಡಿ ಯಾವ ಪಕ್ಷದಲ್ಲಿದ್ದಾರೆ. ತೆರಿಗೆ ಇಲಾಖೆ ಮಲಗಿತ್ತಾ ಎಂದು ಪ್ರಶ್ನಿಸಿದ ಅವರು, ನ್ಯಾಯಾಧೀಶರಿಗೆ 60 ಕೋಟಿ ರೂಪಾಯಿ ಲಂಚ ನೀಡಲು ಮುಂದಾಗಿದ್ದ ಸೋಮಶೇಖರ್​ ರೆಡ್ಡಿ ಜೊತೆ ಪ್ರಧಾನಿ ನರೇಂದ್ರ ಮೋದಿ ವೇದಿಕೆ ಹಂಚಿಕೊಳ್ಳುತ್ತಾರೆ. ಎಲ್ಲಾ ರಾಜಕೀಯ ನಾಯಕರು ಹೇಳುವುದು ಬೇರೆ, ಆಚರಣೆಗೆ ತರುವುದೇ ಬೇರೆ ಎಂದು ಹೇಳಿದರು.

ಇದನ್ನೂ ಓದಿ: ಮೇಕೆದಾಟು ವಿಚಾರ ಅಧಿಕಾರದ ವಸ್ತುವಾಗಿದೆ: ಎಸ್.ಆರ್.ಹಿರೇಮಠ

ಮತದಾರರನ್ನು ಜಾಗೃತಗೊಳಿಸಲು ರಾಜ್ಯದಲ್ಲಿ ಮುಂದಿನ ವರ್ಷದ ಜನವರಿ 2 ರಿಂದ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ನಡೆಸಲಾಗುತ್ತಿದೆ. ಕೂಡಲಸಂಗಮದಿಂದ ಅನ್ನದಾತರಿಗಾಗಿ ಒಂದು ಯಾತ್ರೆ, ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಿಂದ ಮತ್ತೊಂದು ಯಾತ್ರೆ, ಕುಸನೂರಿನಿಂದ ಸಾಮೂಹಿಕ ಭೂಮಿ ಯಾತ್ರೆ ಮತ್ತು ಸಂವಿಧಾನ ಉಳಿಸಲು ಕೋಲಾರದಿಂದ ಯಾತ್ರೆ ಕೈಗೊಳ್ಳಲಾಗುವುದು. ಈ ನಾಲ್ಕು ಯಾತ್ರೆಗಳು ಬೆಂಗಳೂರಿನಲ್ಲಿ ಸೇರಿ ಜ. 11 ರಿಂದ ಸಾಮೂಹಿಕ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ಹಿರೇಮಠ್‌ ತಿಳಿಸಿದರು.

ಇದನ್ನೂ ಓದಿ: ತಡವಾಗಿಯಾದರೂ ಕೇಂದ್ರ ಸರ್ಕಾರ ರೈತರ ಹೋರಾಟಕ್ಕೆ ಮಣಿದಿದೆ.. ಎಸ್‌ ಆರ್‌ ಹಿರೇಮಠ

Last Updated : Nov 13, 2022, 9:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.