ರಾಣೆಬೆನ್ನೂರು: ಡ್ರಗ್ಸ್ ವಿಚಾರದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಬಂಧನವಾದ ಹಿನ್ನೆಲೆ ರಾಣೆಬೆನ್ನೂರಿನ ಅವರ ನಿವಾಸ ಖಾಲಿಯಾಗಿದೆ.
ಇಲ್ಲಿನ ಉಮಾಶಂಕರ ನಗರದಲ್ಲಿರುವ ನಿವಾಸದ ಮನೆಯ ಬಾಗಿಲು ಹಾಕಲಾಗಿದೆ. ದರ್ಶನ್, ರುದ್ರಪ್ಪ ಮತ್ತು ಮಂಜುಳಾಬಾಯಿ ಲಮಾಣಿಯವರ ಏಕೈಕ ಸುಪುತ್ರನಾಗಿದ್ದು, ಪದವಿಯನ್ನು ಓದುತ್ತಿದ್ದ ಎನ್ನಲಾಗಿದೆ. ಅಲ್ಲದೇ ಇತ್ತೀಚೆಗೆ ಪದವಿ ಅಪೂರ್ಣಗೊಳಿಸಿ ಬೆಂಗಳೂರಿನಲ್ಲಿ ಇದ್ದ ಅವರು, ಕೊರೊನಾ ಹಿನ್ನೆಲೆ ಬೆಂಗಳೂರು ತೊರೆದು ಕಳೆದ ಐದು ತಿಂಗಳಿಂದ ರಾಣೆಬೆನ್ನೂರು ಮತ್ತು ಹಾವೇರಿ ನಗರದ ಮನೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ.
ದರ್ಶನ್ ತಾಯಿ ವೃತ್ತಿಯಲ್ಲಿ ಶಿಕ್ಷಕಿ: ಡ್ರಗ್ಸ್ ವಿಚಾರದಲ್ಲಿ ಬಂಧನವಾಗಿರುವ ದರ್ಶನ್ ಅವರ ತಾಯಿ ಮಂಜುಳಾಬಾಯಿ ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಮನೆಯ ಕೆಳಗಡೆ ಸಂಕೇತ ಎಂಬ ಶಾಲೆ ತೆರೆದು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಇಂತಹ ಸುಶಿಕ್ಷಿತರ ಕುಟುಂಬದಲ್ಲಿ ಹುಟ್ಟಿರುವ ಮಗ ಡ್ರಗ್ಸ್ ವಿಚಾರದಲ್ಲಿ ಸಿಲುಕಿಕೊಂಡಿರುವುದು ವಿಪರ್ಯಾಸದ ಸಂಗತಿ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಡ್ರಗ್ಸ್ ಪ್ರಕರಣ: ರಾಣೆಬೆನ್ನೂರಿನ ರುದ್ರಪ್ಪ ಲಮಾಣಿ ಮನೆಗೆ ಬೀಗ...!
ಡ್ರಗ್ಸ್ ಪ್ರಕರಣ ಸಂಬಂಧ ಹಾವೇರಿಯ ಮಾಜಿ ಸಚಿವ ರುದ್ರಪ್ಪ ಲಮಾಣಿ ಪುತ್ರ ದರ್ಶನ್ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.