ETV Bharat / state

ಹಾವೇರಿ.. ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯ ರಕ್ಷಣೆ - ನಡುಗಡ್ಡೆಯನ್ನು ಸೇರಿ ಜೀವ ಉಳಿಸಿಕೊಂಡಿದ್ದರು

ಕೈಕಾಲು ತೊಳೆಯಲು ಕುಮದ್ವತಿ ನದಿಗೆ ಹೋಗಿದ್ದ ಹಾಲಪ್ಪ ಎಂಬುವವರು ನದಿಗೆ ಬಿದ್ದು ಒಂದು ಕಿಲೋಮೀಟರ್ ದೂರ​ ಕೊಚ್ಚಿ ಹೋಗಿದ್ದು, ಸಿಕ್ಕ ಗಿಡ ಗಂಟಿಗಳನ್ನು ಹಿಡಿದು ನಡುಗಡ್ಡೆಯನ್ನು ಸೇರಿ ಜೀವ ಉಳಿಸಿಕೊಂಡಿದ್ದರು. ಅವರನ್ನು ನಡುಗಡ್ಡೆಯಿಂದ ರಕ್ಷಣೆ ಮಾಡಲಾಗಿಡೆ.

rescue-of-a-person-stuck-in-the-island-in-haveri
ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯ ರಕ್ಷಣೆ
author img

By

Published : Aug 13, 2022, 10:47 PM IST

ಹಾವೇರಿ : ರಾತ್ರಿ ಪೂರ್ತಿ ನಡುಗಡ್ಡೆಯಲ್ಲಿ ಸಿಲುಕಿದ್ದ ವ್ಯಕ್ತಿಯನ್ನ ಸ್ಥಳೀಯರು ರಕ್ಷಣೆ ಮಾಡಿದ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಯಡಗೋಡದಲ್ಲಿ ನಡೆದಿದೆ. ಯಡಗೋಡ ಗ್ರಾಮದ ಸಮೀಪ ಇರುವ ಕುಮದ್ವತಿ ನದಿಯ ನಡುಗಡ್ಡೆಯಲ್ಲಿ ರಾತ್ರಿ ಪೂರ್ತಿ ಕಳೆದ ವ್ಯಕ್ತಿಯನ್ನು 50 ವರ್ಷದ ಹಾಲಪ್ಪ ಕೆಳಗಿನಮನಿ ಎಂದು ಗುರುತಿಸಲಾಗಿದೆ.

ಹಿರೇಕೆರೂರು ತಾಲೂಕಿನ ಹಿರೇಮೊರಬದ ಗ್ರಾಮದ ನಿವಾಸಿಯಾಗಿರುವ ಹಾಲಪ್ಪ ಶುಕ್ರವಾರ ರಟ್ಟೀಹಳ್ಳಿ ತಾಲೂಕಿನ ಮಾದಾಪುರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗ್ತಿದೆ. ಈ ಸಂದರ್ಭದಲ್ಲಿ ಕೈಕಾಲು ತೊಳೆಯಲು ಕುಮದ್ವತಿ ನದಿಗೆ ಹೋಗಿದ್ದ ಹಾಲಪ್ಪ ನದಿಗೆ ಬಿದ್ದಿದ್ದಾರೆ. ನಂತರ ಒಂದು ಕಿಲೋಮೀಟರ್​ ದೂರದವರೆಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ ಹಾಲಪ್ಪ, ನಡುಗಡ್ಡೆಯಲ್ಲಿ ಸಿಕ್ಕಿದ್ದ ಗಿಡಗಂಟೆಗಳನ್ನು ಹಿಡಿದುಕೊಂಡು ಆಶ್ರಯ ಪಡೆದಿದ್ದಾರೆ.

ನಡುಗಡ್ಡೆಯಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಯ ರಕ್ಷಣೆ

ಶನಿವಾರ ಮಧ್ಯಾಹ್ನ ಹಾಲಪ್ಪ ಅವರನ್ನು ಗಮನಿಸಿದ ರೈತರು ರಕ್ಷಣೆಗೆ ಮುಂದಾದರು. ಮೀನುಗಾರರು ಮತ್ತು ಪೊಲೀಸರ ಸಹಾಯದಿಂದ ತೆಪ್ಪದ ಮೂಲಕ ಹೋಗಿ ಹಾಲಪ್ಪ ಅವರನ್ನು ರಕ್ಷಿಸಿದ್ದಾರೆ. ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಹಾಲಪ್ಪ ಅವರಿಗೆ ರಟ್ಟೀಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ರಟ್ಟೀಹಳ್ಳಿ ತಹಶೀಲ್ದಾರ್ ಅರುಣಕುಮಾರ ಕಾರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ : ದಾಂಡೇಲಿಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ಎಳೆದೊಯ್ದ ಮೊಸಳೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.