ರಾಣೆಬೆನ್ನೂರು: ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣಾ ರಣರಂಗ ಕೊನೆಯ ಹಂತ ತಲುಪಿದ್ದು, ಚುನಾವಣಾಧಿಕಾರಿಗಳು ನಾಳೆ ನಡೆಯುವ ಮತದಾನಕ್ಕೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ.
ರಾಣೆಬೆನ್ನೂರಿನ ಹೊರವಲಯದಲ್ಲಿರುವ ಸೆಂಟ್ ಲಾರೆನ್ಸ್ ಶಾಲಾ ಆವರಣದಲ್ಲಿ ಚುನಾವಣೆಗಾಗಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ಮತಗಟ್ಟೆಯ ಅಧಿಕಾರಿಗಳು ತಮ್ಮ ತಮ್ಮ ಮತಗಟ್ಟೆಗೆ ಮತಯಂತ್ರಗಳೊಂದಿಗೆ ತೆರಳಿದರು.
ಕ್ಷೇತ್ರದಲ್ಲಿ ಒಟ್ಟು 233137 ಮತದಾರರಿದ್ದು, ಇದರಲ್ಲಿ1,14,497 ಮಹಿಳಾ , ಹಾಗೂ 1,18,627 ಪುರಷ ಮತದಾರರಿದ್ದು, ಇತರೆ 13 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 266 ಮತಗಟ್ಟೆಗಳನ್ನು ತೆರೆಯಲಾಗಿದ್ದು, ಅದರಲ್ಲಿ 54 ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಅವುಗಳಲ್ಲಿ 1 ಪಿಂಕ್ ಮತಗಟ್ಟೆ, 1 ವಿಕಲಚೇತನ ಮತಗಟ್ಟೆ , 1 ಮಾದರಿ ಮತಗಟ್ಟೆ ಎಂದು ಪರಿಗಣಿಸಲಾಗಿದೆ.
ನಾಳೆ ನಡೆಯಲಿರುವ ಮತದಾನಕ್ಕಾಗಿ ಸುಮಾರು 2000 ಕ್ಕೂ ಅಧಿಕ ಸಿಬ್ಬಂದಿಗಳನ್ನ ನಿಯೋಜನೆ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕು ಶಿಕ್ಷಕರು ಹಾಗೂ ತಾಲ್ಲೂಕು ಆಡಳಿತದ ಸಿಬ್ಬಂದಿಗಳು ಮತಯಂತ್ರಗಳನ್ನ ತೆಗೆದುಕೊಂಡು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು.