ರಾಣೆಬೆನ್ನೂರು (ಹಾವೇರಿ): ಕೊರೊನಾ ಭಯದ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಿದ ಶಿಕ್ಷಣ ಇಲಾಖೆ ಫಲಿತಾಂಶ ಸಹ ಪ್ರಕಟಿಸಿತ್ತು. ಈ ನಡುವೆ ರಾಣೆಬೆನ್ನೂರು ತಾಲೂಕಿಗೆ ಸಿ ಗ್ರೇಡ್ ಲಭಿಸಿದ್ದು, ಕಳೆದ ಬಾರಿಗೆ ಹೋಲಿಸಿದರೆ ಕಳಪೆ ಸಾಧನೆ ವ್ಯಕ್ತವಾಗಿದೆ.
ಸರ್ಕಾರ ನೀಡಿರುವ ‘ಸಿ’ ಗ್ರೇಡ್ಗೆ ತಾಲೂಕು ತೃಪ್ತಿಪಟ್ಟಿದೆ. ತಾಲೂಕಿನಲ್ಲಿ ಒಟ್ಟು 4,466 ವಿದ್ಯಾರ್ಥಿಗಳಲ್ಲಿ ಈ ಬಾರಿ ಎಷ್ಟು ವಿದ್ಯಾರ್ಥಿಗಳು ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿದ್ದಾರೆ ಎಂಬ ಸರಿಯಾದ ಮಾಹಿತಿ ಇಲ್ಲದಂತಾಗಿದೆ. ಈ ಕುರಿತು ರಾಣೆಬೆನ್ನೂರು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಹ ಸರಿಯಾಗಿ ಮಾಹಿತಿ ನೀಡದೆ ಗೊಂದಲ ಉಂಟುಮಾಡಿದ್ದಾರೆ.
ಫಲಿತಾಂಶ ಬಂದು 5 ದಿನವಾದರು ಇಲಾಖೆಯವರು ನಮಗೆ ಫಲಿತಾಂಶ ವಿವರ ಕಳುಹಿಸಿ ಕೊಟ್ಟಿಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ಪ್ರತಿ ಶಾಲೆಯ ಫಲಿತಾಂಶ ತರಿಸಿಕೊಂಡು ಮಾಹಿತಿ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಇನ್ನೂ ಮುಂದಾಗದೇ ಇರುವುದು ಶೋಚನೀಯ.
‘ಸಿ’ ಗ್ರೇಡ್ ಬರಲು ಕಾಣರವೇನು..?
ರಾಣೆಬೆನ್ನೂರು ತಾಲೂಕು ಶಿಕ್ಷಣದಲ್ಲಿ ಮುಂದುವರಿದ ನಗರವಾಗಿದೆ. ಆದರೆ ಈ ಬಾರಿ ಎಸ್ಎಸ್ಎಲ್ಸಿ ಫಲಿತಾಂಶ ನೋಡಿದರೆ ಶಿಕ್ಷಣದ ಗುಣಮಟ್ಟ ಕಡಿಮೆಯಾಗಿದೆ ಎನಿಸುತ್ತಿದೆ. ಅಲ್ಲದೇ ಸರ್ಕಾರಿ ಪ್ರೌಢ ಶಾಲೆಗಳಿಗೆ ಎಲ್ಲಾ ವ್ಯವಸ್ಥೆ ಕಲ್ಪಿಸಿದರೂ ಸಹ ಶಿಕ್ಷಕರು ಮಕ್ಕಳಿಗೆ ಸರಿಯಾದ ಕಲಿಕೆ ನೀಡುತ್ತಿಲ್ಲವೆಂಬುದು ಪಾಲಕರ ಆರೋಪವಾಗಿದೆ.