ರಾಣೆಬೆನ್ನೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಪಡಿತರ ವಿತರಣೆ ಮಾಡ್ತಿರೋ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದಲ್ಲಿ ನಡೆದಿದೆ.
ನಗರದಲ್ಲಿನ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರದ ಆದೇಶದಂತೆ ಪಡಿತರ ವಿತರಣೆ ಮಾಡಲಾಗ್ತಿದೆ. ಆದ್ರೆ ಬಹುತೇಕ ಅಂಗಡಿಗಳ ಮುಂದೆ ಸಾಮಾಜಿಕ ಅಂತರ ಕಾಯ್ದುಕೊಳ್ಳೋ ಬಾಕ್ಸ್ಗಳನ್ನ ಹಾಕಿಲ್ಲ. ಪಡಿತರ ಪಡೆಯಲು ಬಂದ ಜನರೂ ಸಹ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಒಬ್ಬರ ಹಿಂದೊಬ್ಬರು ನಿಂತು, ಅಕ್ಕಪಕ್ಕದಲ್ಲಿ ಕುಳಿತುಕೊಂಡು ಪಡಿತರ ತೆಗೆದುಕೊಂಡು ಹೋಗ್ತಿದ್ದಾರೆ.
ಪೊಲೀಸರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸಾಕಷ್ಟು ಜಾಗೃತಿ ಮೂಡಿಸಿದ್ರೂ ಜನರು ಹಾಗೂ ನ್ಯಾಯಬೆಲೆ ಅಂಗಡಿಗಳವರು ಮಾತ್ರ ರೂಲ್ಸ್ಗಳಿಗೆ ಡೋಂಟ್ ಕೇರ್ ಅಂತಾ ಪಡಿತರ ವಿತರಣೆ ಹಾಗೂ ಪಡಿತರ ಪಡೆಯೋದ್ರಲ್ಲಿ ಬ್ಯೂಜಿ ಆಗಿದ್ದಾರೆ.