ರಾಣೆಬೆನ್ನೂರು: ಮೂಲ ಸೌಕರ್ಯಗಳಿಂದ ವಂಚಿತವಾದ ನಗರದ ಹುಣಸಿಕಟ್ಟಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆ ರೋಗಿಗಳಿಲ್ಲದೆ ಬಣಗುಡುತ್ತಿದೆ.
2014 ರಲ್ಲಿ ಸುಮಾರು 1ಕೋಟಿ ರೂ. ವ್ಯಯಿಸಿ ಈ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಲಾಗಿದೆ. ಆದರೆ ಇಂದಿಗೂ ಆಸ್ಪತ್ರೆಗೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಈ ಆಸ್ಪತ್ರೆ ಕಡೆ ಯಾವೊಬ್ಬ ರೋಗಿಯೂ ತಲೆ ಹಾಕುತ್ತಿಲ್ಲ.
ಇನ್ನು ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿಗೆ ವಸತಿ ಗೃಹಗಳನ್ನೂ ನಿರ್ಮಾಣ ಮಾಡಲಾಗಿದೆ. ಆದರೆ ಯಾವೊಬ್ಬ ಸಿಬ್ಬಂದಿಯೂ ಇಲ್ಲಿ ವಾಸ ಮಾಡುತ್ತಿಲ್ಲ. ಹೀಗಾಗಿ ವಸತಿ ಗೃಹದ ಬಾಗಿಲುಗಳೆಲ್ಲ ಬಿಸಿಲಿನ ತಾಪಕ್ಕೆ ಹಾಳಾಗಿ ಪಾಳು ಬಿದ್ದಿವೆ. ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಹಲವು ಬಾರಿ ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಯಾರು ಸ್ಪಂದಿಸಿಲ್ಲ ಎಂಬುವುದು ಇಲ್ಲಿನ ವೈದ್ಯರ ಅಳಲು.