ETV Bharat / state

ಸರ್ಕಾರಿ ಬಸ್ ಸಂಚಾರ ಬಂದ್ ಮಾಡಿ: ಡಿಪೋ ಮ್ಯಾನೇಜರ್​ಗೆ ರೈತ ಸಂಘಟನೆಯಿಂದ ಬೆದರಿಕೆ ಆರೋಪ - ರಾಣೆಬೆನ್ನೂರು

ಬಸ್ ಸೇವೆ ಆರಂಭಿಸುವುದಾದರೆ ರಾಜ್ಯಾದ್ಯಂತ ಬಸ್ ಸೇವೆ ಆರಂಭಿಸಿ. ಇಲ್ಲವಾದರೆ ಎಲ್ಲಾ ಬಸ್ ಸಂಚಾರ ಬಂದ್‌ ಮಾಡಿ ಎಂದು ರಾಣೆಬೆನ್ನೂರು ಡಿಪೋ ಮ್ಯಾನೇಜರ್​ಗೆ ರೈತ ಸಂಘಟನೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

Ranebennur
ಡಿಪೋ ಮ್ಯಾನೇಜರ್ ಬೆದರಿಕೆ ಹಾಕಿದ ರೈತ ಸಂಘಟನೆ
author img

By

Published : Apr 11, 2021, 3:53 PM IST

ರಾಣೆಬೆನ್ನೂರು: ಮುಷ್ಕರದ ನಡುವೆ ಹಿರಿಯ ಅಧಿಕಾರಿಗಳು ಬೆರಳಣಿಕೆಯಷ್ಟು ಬಸ್ ಸಂಚಾರ ಆರಂಭ ಮಾಡಿದ್ದಾರೆ. ಆದರೆ ಬಸ್ ಸಂಚಾರ ಬಂದ್ ಮಾಡುವಂತೆ ರೈತ ಸಂಘಟನೆ ರಾಣೆಬೆನ್ನೂರು ಡಿಪೋ ಮ್ಯಾನೇಜರ್​ಗೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ.

ಡಿಪೋ ಮ್ಯಾನೇಜರ್ ಬೆದರಿಕೆ ಹಾಕಿದ ರೈತ ಸಂಘಟನೆ

ರಾಣೆಬೆನ್ನೂರು ನಗರದ ಬಸ್ ನಿಲ್ದಾಣದಲ್ಲಿ ದಾವಣಗೆರೆ ಹಾಗೂ ಹಾವೇರಿಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಯಾಣಿಕರ ಅನುಕೂಲಕ್ಕೆ 6 ಬಸ್​ಗಳನ್ನು ಬಿಟ್ಟಿದ್ದಾರೆ. ಇದನ್ನು ವಿರೋಧಿಸಿ ರೈತ ಸಂಘಟನೆ ಮುಖಂಡರು ಖಾಸಗಿ ವಾಹನಗಳು ಸರ್ಕಾರದ ಆದೇಶದ ‌ಮೇರೆಗೆ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿವೆ. ಸಾರಿಗೆ ನೌಕರರ ಮುಷ್ಕರದ ನಡುವೆ ಹಿರಿಯ ಅಧಿಕಾರಿಗಳು ಒಂದೆರಡು ಬಸ್​​ಗಳನ್ನು ಓಡಿಸುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಸ್ ಸೇವೆ ಆರಂಭಿಸುವುದಾದರೆ ರಾಜ್ಯಾದ್ಯಂತ ಬಸ್ ಸೇವೆ ಆರಂಭಿಸಿ. ಇಲ್ಲವಾದರೆ, ಎಲ್ಲಾ ಬಸ್ ಸಂಚಾರ ಬಂದ್‌ ಮಾಡಿ ಎಂದು ಡಿಪೋ ಮ್ಯಾನೇಜರ್​ಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.