ETV Bharat / state

ಡಾಂಬರ್​ನಲ್ಲಿ ಸಿಲುಕಿ ಒದ್ದಾಡುತ್ತಿದ್ದ ನಾಗಪ್ಪ.. ಹಾವನ್ನು ರಕ್ಷಿಸಿ ಮಾನವೀಯತೆ ಮೆರೆದ ಹಾವೇರಿ ವ್ಯಕ್ತಿ

ಹುಕ್ಕೇರಿ ಮಠದ ಬಳಿ ಡಾಂಬರ್​ನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡಿ, ಅದನ್ನು ಅರಣ್ಯಕ್ಕೆ ಬಿಡಲಾಗಿದೆ.

haveri
ಡಾಂಬರ್​ನಲ್ಲಿ ಸಿಲುಕಿಕೊಂಡು ಹೈರಾಣಾಗಿದ್ದ ನಾಗಪ್ಪನ ರಕ್ಷಣೆ
author img

By

Published : Jul 5, 2021, 7:34 AM IST

ಹಾವೇರಿ: ನಗರದ ಹುಕ್ಕೇರಿ ಮಠದ ಬಳಿ ಡಾಂಬರ್​ನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ನಾಗರಹಾವನ್ನು ರಕ್ಷಣೆ ಮಾಡಲಾಗಿದೆ. ಪ್ರಾಣ ಸಂಕಟದಲ್ಲಿದ್ದ ಹಾವಿಗೆ ಜಗದೀಶ್​ ಆತನ ಗೆಳೆಯರು ಮರು ಜೀವ ನೀಡಿ, ಮಾನವೀಯತೆ ಮೆರೆದಿದ್ದಾರೆ.

ಡಾಂಬರ್​ನಲ್ಲಿ ಸಿಲುಕಿಕೊಂಡು ಹೈರಾಣಾಗಿದ್ದ ನಾಗಪ್ಪನ ರಕ್ಷಣೆ

ಹುಕ್ಕೇರಿ ಮಠದ ಬಳಿ ರಸ್ತೆಗೆ ಬಳಸುವ ಡಾಂಬರ್​ ತುಂಬಿದ್ದ ಡಬ್ಬಿಯ ಪಕ್ಕದಲ್ಲಿ ಬಿದ್ದಿದ್ದ ನಾಗರಹಾವೊಂದು ಆಕಸ್ಮಿಕವಾಗಿ ಡಾಂಬರ್​ನಲ್ಲಿ ಸಿಲುಕಿಕೊಂಡು ಪರಿತಪಿಸುತ್ತಿತ್ತು. ಇದನ್ನು ಗಮನಿಸಿದ ನಗರದ ಜಗದೀಶ್ ಹಾಗೂ ಆತನ ಗೆಳೆಯರು, ಡಾಂಬರ್​ನಲ್ಲಿ ಬಿದ್ದಿದ್ದ ಈ ನಾಗರಹಾವನ್ನು ಹಿಡಿದು, ಬಳಿಕ ನೀರಿನಿಂದ ಸ್ವಚ್ಛಗೊಳಿಸಿದ್ದಾರೆ. ಬಳಿಕ ಹಾವನ್ನು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

ಇದನ್ನೂ ಓದಿ: ಅಚ್ಚರಿಯಾದರೂ ಸತ್ಯ: 34 ಬಾರಿ ವಿಷಸರ್ಪ ಕಡಿದರೂ ಬದುಕುಳಿದ ಗಟ್ಟಿಜೀವ ಇದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.