ಶಿಗ್ಗಾಂವ(ಹಾವೇರಿ): ಕೊರೊನಾ ಸೋಂಕಿನಿಂದ ಶಿಗ್ಗಾಂವ ಪಟ್ಟಣದ 75 ವರ್ಷದ ವೃದ್ಧೆ ಮೃತಪಟ್ಟಿದ್ದು, ಮೃತದೇಹವು ಸ್ಮಶಾನ ತಲುಪಿದ್ರೂ ಅಂತ್ಯಕ್ರಿಯೆಗೆ ಸಿದ್ಧತೆ ನಡೆದಿಲ್ಲ. ಶಿಗ್ಗಾಂವ ಪುರಸಭೆ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ ಅವರಿಂದ ನಿರ್ಲಕ್ಷ್ಯ ಧೋರಣೆ ನಡೆದಿದೆ.
ಮೃತದೇಹ ಬಂದು ಸ್ಮಶಾನ ತಲುಪಿದ ಅರ್ಧ ಗಂಟೆಯ ನಂತರ ಗುಂಡಿ ತೋಡಲು ಜೆಸಿಬಿ ಬಂದಿದ್ದು, ತಹಶೀಲ್ದಾರ್ ಸ್ಮಶಾನದ ಬಳಿ ಬಂದು ನಿಂತರೂ, ಪುರಸಭೆ ಮುಖ್ಯಾಧಿಕಾರಿ ಹಿರೇಮಠ ಸ್ಥಳಕ್ಕೆ ಬಂದಿಲ್ಲ.
ಗುಂಡಿ ತೋಡಲು ಪುರಸಭೆಯ ಜೆಸಿಬಿ ಕೆಟ್ಟಿದೆ ಎಂದು ಹೇಳಿ, ಅರ್ಧ ಗಂಟೆಗೂ ಹೆಚ್ಚು ಸಮಯವನ್ನು ಕಾಯಿಸಿದ್ದಾರೆ. ಅರ್ಧ ಗಂಟೆಯಾದ ಮೇಲೆ ಗುಂಡಿ ತೋಡಿಸಿದ್ದಾರೆ.