ಹಾವೇರಿ: ರಾಣೆಬೆನ್ನೂರು ತಾಲೂಕಿನ ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯ ಮಟ್ಕಾ ಅಡ್ಡೆ ಮೇಲೆ ಹಾವೇರಿ ಎಸ್ಪಿ ಹನುಮಂತರಾಯ ನೇತೃತ್ವದಲ್ಲಿ ದಾಳಿ ಮಾಡಿ 1,48,020 ರೂಪಾಯಿ ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ-ಹರಿಹರ ಗಡಿ ಭಾಗದ ತುಂಗಭದ್ರಾ ನದಿ ಪಕ್ಕದ ಕೊಡಿಯಾಲ ಹೊಸಪೇಟೆ ಬಳಿಯ ಇಟ್ಟಿಗೆ ಬಟ್ಟಿಗಳ ಸಮೀಪದಲ್ಲಿ ಮಟ್ಕಾ ದಂಧೆಕರೋರರು ಜಾತ್ರೆಯ ಸ್ವರೂಪದಲ್ಲಿ ಮಟ್ಕಾ ಬರೆಯುತ್ತಿರುವುದು ಕಂಡುಬಂದಿದ್ದು, ಆ ಸ್ಥಳದಿಂದ ಕೂಗಳತೆಯ ದೂರದಲ್ಲಿ ಪೊಲೀಸ್ ಠಾಣೆಯಿದ್ದರೂ ಇದ್ಯಾವುದಕ್ಕೂ ಸೊಪ್ಪು ಹಾಕದೆ ಮಟ್ಕಾ ಆಡುತ್ತಿದ್ದರು ಎನ್ನಲಾಗಿದೆ.
ಎಸ್ಪಿ ನೇತೃತ್ವದಲ್ಲಿ ತಂಡ ಕಾರ್ಯಪ್ರವೃತ್ತರಾಗಿ ಇಂದು ಮಟ್ಕಾ ಅಡ್ಡೆ ಮೇಲೆ ದಾಳಿ ನಡೆಸಿ 23 ಜನರನ್ನ ಬಂಧಿಸಿ 1,48,020 ರೂ. ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಬಂಧಿತರಾದ 24 ಜನರ ಮೇಲೆ ಕೆಪಿ ಆಕ್ಟ್ ಅಡಿ ಕುಮಾರಪಟ್ಟಣಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಸುರಪುರ: ಕುರಿಗಾಹಿ ಜೀವ ಉಳಿಸಿ ತನ್ನ ಜೀವತೆತ್ತ ಬಾಲಕಿ