ETV Bharat / state

ಪೊಲೀಸರ ದಾಳಿ: Mobile ಮಾರುತ್ತಿದ್ದ ಖದೀಮನ ಬಂಧನ - haveri latest news

ಹಾನಗಲ್ ತಾಲೂಕಿನ ತಿಳುವಳ್ಳಿಯಲ್ಲಿ ಮೊಬೈಲ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

Police attack
Police attack
author img

By

Published : Jun 21, 2021, 9:01 PM IST

ಹಾವೇರಿ: ಕದ್ದ ಮೊಬೈಲ್ ಮಾರುತ್ತಿದ್ದ ಆರೋಪಿಗಳ ಮೇಲೆ ಜಿಲ್ಲಾ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ. ಹಾನಗಲ್ ತಾಲೂಕಿನ ತಿಳುವಳ್ಳಿಯಲ್ಲಿ ಮೊಬೈಲ್ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವನನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

Mobile ಮಾರುತ್ತಿದ್ದ ಖದೀಮನ ಬಂಧನ

ಆರೋಪಿಗಳನ್ನು ನಿತಿನ್ ಮತ್ತು ಮಧು ಎಂದು ಗುರುತಿಸಲಾಗಿದೆ. ಬಂಧಿತ ನಿತಿನ್​​ನಿಂದ ಸುಮಾರು 50 ಮೊಬೈಲ್​ಗಳನ್ನ ವಶಪಡಿಸಿಕೊಳ್ಳಲಾಗಿದೆ. ತಲೆ ಮರೆಸಿಕೊಂಡಿರುವ ಮಧುಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಪಿ ಹನುಮಂತರಾಯ, ಆರೋಪಿತರು ಎಲ್ಲಿಂದ ಮೊಬೈಲ್ ತರುತ್ತಿದ್ದರು. ಇವರಿಗೆ ಯಾರು ಮೊಬೈಲ್ ನೀಡುತ್ತಿದ್ದರು ಅನ್ನೋದು ತನಿಖೆಯಿಂದಷ್ಟೇ ತಿಳಿಯಬೇಕಿದೆ. ಮುಂಬೈನಿಂದ ಮೊಬೈಲ್​ಗಳನ್ನು ತರಿಸಿಕೊಳ್ಳುತ್ತಿರುವ ಸಾಧ್ಯತೆಯಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:15 ಕೋಟಿ ರೂ. ಗಾಂಜಾ ಸೀಜ್: ನಾಲ್ವರು ಆರೋಪಿಗಳ ಬಂಧಿಸಿದ NCB

ಇದೊಂದು ದೊಡ್ಡ ಮಟ್ಟದ ಜಾಲವಿದ್ದು, ತನಿಖೆಯಿಂದ ಸತ್ಯಾಸತ್ಯತೆ ಹೊರಬೀಳಲಿದೆ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿರುವುದರಿಂದ ತನಿಖೆ ಮುಗಿದ ಬಳಿಕ ಎಲ್ಲಾ ಮಾಹಿತಿ ನೀಡಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.