ETV Bharat / state

ರಾಮ ಮಂದಿರ ಬ್ಲಾಸ್ಟ್​ ಮಾಡಲು ಪಿಎಫ್​ಐ ಸಂಚು: ಪ್ರಮೋದ್ ಮುತಾಲಿಕ್.. ನಟ ಚೇತನ ವಿರುದ್ಧವೂ ಗರಂ - PFI plan to blast

ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆ ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಅದನ್ನೂ ದಿಕ್ಕರಿಸಿ ರಾಮಮಂದಿರ ಬ್ಲಾಸ್ಟ್ ಮಾಡಿ ಬಾಬರ್ ಮಸೀದಿ ಕಟ್ಟುತ್ತೇವೆ ಎನ್ನುವ ಇವರದು ಡೇಂಜರ್​ ಮಾನಸಿಕತೆ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.

Pramod Muthalik
ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್
author img

By

Published : Oct 20, 2022, 2:17 PM IST

ಹಾವೇರಿ: ರಾಮಮಂದಿರ ಬ್ಲಾಸ್ಟ್ ಮಾಡಬೇಕು ಎನ್ನುವ ಪಿಎಫ್ಐ ಸಂಚು ಬೆಳಕಿಗೆ ಬಂದಿದೆ. ಐವರು ಪಿಎಫ್ಐ ಕಾರ್ಯಕರ್ತರನ್ನ ಬಂಧಿಸಿದ ಮಹಾರಾಷ್ಟ್ರ ಸರ್ಕಾರಕ್ಕೆ ಅಭಿನಂದನೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದ ಎಟಿಎಸ್‌ನವರು ಈ ಕಾರ್ಯ ಮಾಡಿದ್ದು ಶ್ಲಾಘನೀಯ. ಎಟಿಎಸ್‌ನವರ ಮುಂದೆ ಪಿಎಫ್ಐ ಕಾರ್ಯಕರ್ತರು ಈ ವಿಷಯ ಬಾಯಿಬಿಟ್ಟಿದ್ದಾರೆ. ದೇವಸ್ಥಾನ ಒಡೆದು ಮಸೀದಿ ಕಟ್ಟಿದ್ದಾರೆ ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಅದನ್ನೂ ದಿಕ್ಕರಿಸಿ ರಾಮಮಂದಿರ ಬ್ಲಾಸ್ಟ್ ಮಾಡಿ ಬಾಬರ್ ಮಸೀದಿ ಕಟ್ಟುತ್ತೇವೆ ಎನ್ನುವ ಇವರದು ಅಪಾಯಕಾರಿ ಮಾನಸಿಕತೆ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.

ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್

ಭಾರತದಲ್ಲಿ ಇಸ್ಲಾಂನ ಕನಸು ಸರಿಯಲ್ಲ: ರಾಮಮಂದಿರ ಬ್ಲಾಸ್ಟ್ ಮಾಡಲು ಹೊರಟವರ ಬಂಧನ ಮತ್ತು ಪಿಎಫ್ಐ ನಿಷೇಧ ಮಾಡಿರುವುದು ಸ್ವಾಗತಾರ್ಹ. ಈ ದೇಶದ ಮುಸ್ಲಿಮರು ರಾಮಮಂದಿರ ಧ್ವಂಸ ಮಾಡುವ ಕನಸು ಕಾಣಬೇಡಿ. ಹಿಂದೂ ಧರ್ಮ ಜಾಗೃತವಿದೆ. ಕಾನೂನಿದೆ, ಸಂವಿಧಾನವಿದೆ. ಈ ದೇಶದ ಮಣ್ಣಿನ ಅನ್ನತಿಂದು ಭಾರತದಲ್ಲಿ ಇಸ್ಲಾಂನ ಕನಸು ಸರಿಯಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಹಲಾಲ್ ಮುಕ್ತ ದೀಪಾವಳಿ ಅಭಿಯಾನ: ಹಲಾಲ್ ಮುಕ್ತ ದೀಪಾವಳಿ ಕುರಿತಂತೆ ಮಾತನಾಡಿದ ಅವರು ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಆರಂಭಿಸಿದ್ದೇವೆ. ಹಲಾಲ್ ಎನ್ನುವುದು ಖುರಾನ್​​ನಲ್ಲಿ ಮಾಂಸದ ವಿಚಾರದಲ್ಲಿ ಮಾತ್ರವಿತ್ತು. ಇವತ್ತು ಹಲಾಲ್ ಎನ್ನುವುದು ಮಾಂಸದಲ್ಲಿ ಮಾತ್ರವಲ್ಲ ಎಲ್ಲ ಪದಾರ್ಥಗಳಲ್ಲಿದೆ. ಇದ್ರಿಂದ ಲಕ್ಷಾಂತರ ಕೋಟಿ ಹಣ ಆಲ್ ಜಮಾಯತ್ ಆಲ್ ಉಲೇಮಾ ಟ್ರಸ್ಟ್​​ಗೆ ಜಮಾ ಆಗುತ್ತಿದೆ. ಈ ದುಷ್ಟರಿಗೆ ಭಯೋತ್ಪಾದಕರಿಗೆ ಮಸ್ಲಿಂ ಗೂಂಡಾಗಳಿಗೆ ಈ ಹಣ ಹೋಗುತ್ತಿದೆ. ಇದನ್ನ ತಡೆಯಲು ಹಲಾಲ್ ಮುಕ್ತ ದೀಪಾವಳಿ ಅಭಿಯಾನ ಆರಂಭಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಹಿಂದೂ ಜಾಗರಣ ವೇದಿಕೆ‌ಯಿಂದ ನಟ ಚೇತನ್ ವಿರುದ್ಧ ದೂರು ದಾಖಲು

ನಟ ಚೇತನ್​ರಿಂದ ಕಲ್ಲು ಹಾಕುವ ಪ್ರಯತ್ನ: ಕಾಂತಾರ ಸಿನಿಮಾ ಕುರಿತು ನಟ ಚೇತನ್ ಹೇಳಿಕೆ ಕುರಿತಂತೆ ಮಾತನಾಡಿದ ಅವರು, ಕಾಂತಾರ ಸಿನಿಮಾ ಈಡಿ ಕರ್ನಾಟಕ ಮಾತ್ರವಲ್ಲ ದೇಶದಲ್ಲಿ ಕನ್ನಡ ಡಿಂಮ್ ಡಿಮಾ ಬಾರಿಸುತ್ತಿದೆ. ಕನ್ನಡದ ನೆಲ, ಸಂಸ್ಕೃತಿಯನ್ನ ದೇಶದ ಮೂಲೆ ಮೂಲೆಗೆ ತಗೆದುಕೊಂಡು ಹೋಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಅಂಥಹುದರಲ್ಲಿ ಒಬ್ಬ ದುಷ್ಟ, ಒಬ್ಬ ನೀಚ, ಒಬ್ಬ ನಾಸ್ತಿಕವಾದಿ ನಟ ಚೇತನ್​​ ಕಲ್ಲು ಹಾಕುವ ಪ್ರಯತ್ನ ಮಾಡಿದ್ದು ಖಂಡನೀಯ. ಇದು ಸಂಸ್ಕೃತ ವಿರೋಧಿ ಎಂದು ಮುತಾಲಿಕ್ ಕಿಡಿಕಾರಿದರು.

ಜನಸಂಖ್ಯೆ ನಿಯಂತ್ರಣಕ್ಕೆ ಕಾನೂನು ರಚನೆ ಮಾಡುವ ಪ್ರಕ್ರಿಯೆ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದು ಆಗಲೇಬೇಕು. ಇದರಲ್ಲಿ ಹಿಂದೂ, ಕ್ರಿಶ್ಚಿಯನ್, ಬೌದ್ದ ಸಿಖ್ ಅಂತಾ ಬರುವುದಿಲ್ಲ. ದೇಶ ಜನಸಂಖ್ಯೆಯಲ್ಲಿ ವಿಶ್ವದಲ್ಲಿ ನಂಬರ್ ಎರಡನೇಯ ಸ್ಥಾನದಲ್ಲಿದೆ. ಜನಸಂಖ್ಯೆ ಅಪಾಯಕಾರಿಯಾಗಿದ್ದು, ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಗೆ ಮುತಾಲಿಕ್ ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.