ETV Bharat / state

ಅನಗತ್ಯ ವಾಹನ ಸಂಚಾರ; ಪೊಲೀಸರಿಂದ ದಂಡ ಪ್ರಯೋಗ

ಲಾಕ್​ಡೌನ್​ ಉಲ್ಲಂಘಿಸಿ ರಸ್ತೆಯಲ್ಲಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿದ್ದ ಜನರಿಗೆ ಪೊಲೀಸರು ದಂಡ ವಿಧಿಸುವ ಮೂಲಕ ಎಚ್ಚರಿಸುತ್ತಿದ್ದಾರೆ.

author img

By

Published : Apr 13, 2020, 3:08 PM IST

people gave fine on misrule the vehicle to the police department in haveri
ಲಾಕ್​ಡೌನ್​​ ಉಲ್ಲಂಘನೆ...ಅನಗತ್ಯ ವಾಹನ ಸಂಚಾರ

ಹಾವೇರಿ: ಜಿಲ್ಲೆಯಲ್ಲಿ ಬೈಕ್ ಹಾಗೂ ಕಾರಿನಲ್ಲಿ ಅನವಶ್ಯಕವಾಗಿ ಓಡಾಡುವ ಪುಂಡರು ಹಾಗೂ ಮಾಸ್ಕ್, ಹೆಲ್ಮೆಟ್ ಧರಿಸದೆ ಬೇಕಾಬಿಟ್ಟಿ ಸವಾರಿ ಮಾಡುತ್ತಿರುವ ಮಂದಿಯನ್ನು ತಡೆಯುತ್ತಿರುವ ಪೊಲೀಸರು 500 ರೂಪಾಯಿ ದಂಡ ಹಾಕಿ ಬುದ್ಧಿ ಕಲಿಸುತ್ತಿದ್ದಾರೆ.

ಅನಗತ್ಯ ವಾಹನ ಸಂಚಾರಕ್ಕೆ ಬಿತ್ತು ದಂಡ

ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಜೊತೆಗೆ ಪದೇ ಪದೇ ಓಡಾಡುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಲಾಕ್​ಡೌನ್​ ನಂತರ ಈವರೆಗೆ ಪೊಲೀಸರು 15 ಲಕ್ಷಕ್ಕೂ ಅಧಿಕ ದಂಡದ ಹಣವನ್ನು ವಸೂಲಿ ಮಾಡಿದ್ದು, ಜೊತೆಗೆ 500ಕ್ಕೂ ಅಧಿಕ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಮನೆಬಿಟ್ಟು ಹೊರಗೆ ಓಡಾಡಬೇಡಿ, ಮನೆಯಲ್ಲೇ ಇದ್ದು ಕೊರೊನಾ ಸೋಂಕು ಹರಡೋದನ್ನು ತಡೆಗಟ್ಟಿ ಅಂತ ಹೇಳಿ ಹೇಳಿ ಸಾಕಾಗಿರೋ ಪೊಲೀಸರು ದಂಡ ವಸೂಲಿ ಕಾರ್ಯಕ್ಕೆ ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.