ETV Bharat / state

ಗ್ರಾಮದೊಳಗೆ ಕಾವಿ, ಗ್ರಾಮದ ಹೊರಗೆ ಪ್ಯಾಂಟ್‌, ಶರ್ಟ್‌: ಜನರಿಗೆ ವಂಚಿಸುತ್ತಿದ್ದ ಇಬ್ಬರಿಗೆ ಥಳಿತ

ಇಬ್ಬರು ಆರೋಪಿಗಳು ಕಾವಿ ದಿರಿಸಿನಲ್ಲಿ ಜನರಿಂದ ಹಣ ಸಂಗ್ರಹಿಸಿ ಗ್ರಾಮದ ಹೊರಗೆ ಹೋಗಿ ಕಾವಿ ಕಳಚಿ ಬೇರೆ ಬಟ್ಟೆ ತೊಟ್ಟು ಓಡಾಡುತ್ತಿದ್ದರು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

people-assault-two-fake-swamijis-in-haveri
ಕಾವಿತೊಟ್ಟು ಜನರನ್ನ ವಂಚಿಸುತ್ತಿದ್ದ ಇಬ್ಬರಿಗೆ ಸಾರ್ವಜನಿಕರಿಂದ ಧರ್ಮದೇಟು
author img

By

Published : Mar 31, 2022, 7:01 PM IST

ಹಾವೇರಿ: ಕಾವಿ ತೊಟ್ಟು ಜನರನ್ನು ವಂಚಿಸುತ್ತಿದ್ದ ಇಬ್ಬರನ್ನು ಹಿಡಿದ ಗ್ರಾಮಸ್ಥರು ಧರ್ಮದೇಟು ನೀಡಿದ ಘಟನೆ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕಾರಡಗಿ ಗ್ರಾಮದಲ್ಲಿ ನಡೆದಿದೆ. ಜೇಕಿನಕಟ್ಟಿ ರಸ್ತೆಯಲ್ಲಿ ಗ್ರಾಮಸ್ಥರಿಂದ ಏಟು ತಿಂದವರನ್ನು ವಿಜಯನಗರ ಮೂಲದವರು ಎಂದು ಗುರುತಿಸಲಾಗಿದೆ.

ಆರೋಪಿಗಳು ಹಣ ಸಂಗ್ರಹವಾಗುತ್ತಿದ್ದಂತೆ ಗ್ರಾಮದ ಹೊರಗೆ ಬಂದು ಕಾವಿ ಕಳಚಿಟ್ಟು ಬೇರೆ ಬಟ್ಟೆ ತೊಟ್ಟು ಓಡಾಡುತ್ತಿದ್ದರು. ಮಾದಾಪುರ, ಕಾರಡಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜನರ ಮನೆಗಳಿಗೆ ತೆರಳಿ ಹಣ ಸಂಗ್ರಹಿಸುತ್ತಿದ್ದರು. ನಂತರ ಊರ ಹೊರಗೆ ಬಂದು ಜನಸಾಮಾನ್ಯರಂತೆ ಪ್ಯಾಂಟ್, ಶರ್ಟ್ ಧರಿಸಿ ಓಡಾಡುತ್ತಿದ್ದರು ಎಂದು ಸಾರ್ವಜನಿಕರು ತಿಳಿಸಿದ್ದಾರೆ.

ಇದನ್ನು ಗಮನಿಸಿದ ಗ್ರಾಮಸ್ಥರು ಇಬ್ಬರನ್ನೂ ಕಾವಿ ವೇಶದಲ್ಲಿಯೇ ಹಿಡಿದಿದ್ದಾರೆ. ನಂತರ ಧರ್ಮದೇಟು ನೀಡಿದ್ದಾರೆ. ನಿಮ್ಮಿಂದಾಗಿಯೇ ಹಿಂದೂ ಧರ್ಮಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ, ಕಾವಿ ಕಳಚಿ ಜನಸಾಮಾನ್ಯರಂತೆ ಪ್ಯಾಂಟ್ ಶರ್ಟ್ ಹಾಕಿಸಿ ಅವರನ್ನು ಕಳುಹಿಸಿದ್ದಾರೆ.

ಇದನ್ನೂ ಓದಿ: ಇವಿಎಂ ನಾಪತ್ತೆ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವೆ: ಸ್ಪೀಕರ್ ಕಾಗೇರಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.