ರಾಣೇಬೆನ್ನೂರು: ಕೊರೊನಾ ಬಗ್ಗೆ ಸಾರ್ವಜನಿಕರ ಜಾಗೃತಿ ಮೂಡಿಸುವ ಸಮಯದಲ್ಲಿ ಶಾಸಕ ಅರುಣ್ ಕುಮಾರ್ ಪೂಜಾರ ಮಾಸ್ಕ್ ಧರಿಸದೇ ಇರುವುದರಿಂದ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಪೂಜಾರ ತಾಲೂಕಿನ ಮೈದೂರು, ಗಂಗಾಪುರ, ಗುಡಗೂರು ಗ್ರಾಮಗಳಿಗೆ ತಮ್ಮ ಬೆಂಬಲಿಗರೊಂಗೆ ತೆರಳಿ ತೆರಳಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ತೆರಳಿದ್ದರು.ಈ ಸಮಯದಲ್ಲಿ ಅವರು ಮಾಸ್ಕ್ ಹಾಕಿಕೊಳ್ಳದೇ ಜನರಿಗೆ ಜಾಗೃತಿ ಮೂಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ.
![People are outraged against Arun Kumar Pujara](https://etvbharatimages.akamaized.net/etvbharat/prod-images/6580538_thumb.jpg)
ಇದಕ್ಕೆ ಹಲವರು ಕಮೆಂಟ್ ಮಾಡಿದ್ದು, ದೇಶದ ಪ್ರಧಾನಿ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದ್ದಾರೆ. ಆದರೆ ಅವರ ಪಕ್ಷದ ಶಾಸಕ ಯಾವುದೇ ಅಂತರವಿಲ್ಲದೆ, ಮಾಸ್ಕ್ ಇಲ್ಲದೇ ಜನರಲ್ಲಿ ಜಾಗೃತಿ ಮೂಡಿಸುವ ಜ್ಞಾನವಿಲ್ಲದೆ ಶಾಸಕ ಎಂದು ಕಮೆಂಟ್ ಹಾಕಿದ್ದಾರೆ.