ETV Bharat / state

ಹೋರಿ ಜನ್ಮದಿನಕ್ಕೆ ರಕ್ತದಾನ ಶಿಬಿರ ಏರ್ಪಡಿಸಿದ ಮಾಲೀಕ; 10 ಕೆಜಿ ಕೇಕ್ ಕತ್ತರಿಸಿ ಅಭಿಮಾನಿಗಳ ಸಂಭ್ರಮ - ಜೋಡಿ ಎತ್ತು

ಹೋರಿಯ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಇಲ್ಲೊಬ್ಬ ಮಾಲೀಕರು ಗಮನಸೆಳೆದರು.

Owner of a Bull organized blood donation camp for its birthday
ಹೋರಿ ಜನ್ಮದಿನಕ್ಕೆ ರಕ್ತದಾನ ಶಿಬಿರ ಏರ್ಪಡಿಸಿದ ಮಾಲೀಕ
author img

By

Published : Oct 7, 2021, 8:59 AM IST

ಹಾವೇರಿ: ದೊಡ್ಡ ದೊಡ್ಡ ರಾಜಕೀಯ ನಾಯಕರು, ಸಿನಿಮಾ ನಟ-ನಟಿಯರ ಜನ್ಮದಿನದಂದು ರಕ್ತದಾನ ಶಿಬಿರ ಏರ್ಪಡಿಸುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವ್ಯಕ್ತಿ ತಾವು ಪ್ರೀತಿಯಿಂದ ಸಾಕಿದ್ದ ಹೋರಿಯ ಹುಟ್ಟಿದ ದಿನದಂದು ರಕ್ತದಾನ ಶಿಬಿರ ಏರ್ಪಡಿಸಿ ಮಾದರಿಯಾದರು.

ಹಾವೇರಿಯ ಕೆರಿಮತ್ತಿಹಳ್ಳಿ ಗ್ರಾಮದ ಸಿದ್ದಲಿಂಗೇಶ್ ವಾಲಿ ಎಂಬವರು 6 ವರ್ಷದ ಹಿಂದೆ ತಮಿಳುನಾಡಿನಿಂದ ಹೋರಿ ಖರೀದಿಸಿದ್ದರು. ಈ ಹೋರಿಯನ್ನು ಖರೀದಿಸಿ ತಂದ ದಿನದಂದೇ ಅದರ ಹುಟ್ಟುಹಬ್ಬ ಎಂದು ಅವರು ಆಚರಿಸುತ್ತಿದ್ದಾರೆ.

ಹೋರಿ ಜನ್ಮದಿನಕ್ಕೆ ರಕ್ತದಾನ ಶಿಬಿರ ಏರ್ಪಡಿಸಿದ ಮಾಲೀಕ

‘ಜೀವ ರಾಕ್ಷಸ 220’ ಎಂಬ ಹೆಸರಿನ ಹೋರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಇದೇ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನೂ ಏರ್ಪಡಿಸಲಾಗಿತ್ತು. ಬಳಿಕ ಅಭಿಮಾನಿಗಳು ತಂದ 10 ಕೆ.ಜಿ ಕೇಕ್‌ ಅನ್ನು ಕತ್ತರಿಸಲಾಯಿತು.

ಈ ಹೋರಿ ಸುತ್ತಮುತ್ತಲ ಗ್ರಾಮದಲ್ಲಿ ಜರುಗುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಬಹುಮಾನ ಗಳಿಸುತ್ತಿತ್ತು. ಹೀಗಾಗಿ ಊರಿನಲ್ಲಿ ತನ್ನದೇ ಅಭಿಮಾನಿ ಬಳಗ ಹೊಂದಿದೆ.

ರಕ್ತದಾನ ಶಿಬಿರದಲ್ಲಿ ಹಲವಾರು ಅಭಿಮಾನಿಗಳು ಪಾಲ್ಗೊಂಡು ರಕ್ತದಾನ ಮಾಡಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ನವರಾತ್ರಿ ಸಂಭ್ರಮ: ದಸರಾ ಗೊಂಬೆಗಳ ಮಾರಾಟ ಬಲು ಜೋರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.