ಹಾವೇರಿ: ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿರುವ ಘಟನೆ ಜಿಲ್ಲೆಯ ಹಿರೇಕೆರೂರು ತಾಲೂಕಿನ ಮಾಸೂರು-ಹಿರೇಕೆರೂರು ರಸ್ತೆಯಲ್ಲಿ ನಡೆದಿದೆ.
ನೌಶಾದ್ ಚಿಲ್ಲೂರ (28) ಬಂಧಿತ ಆರೋಪಿ. ಈತನಿಂದ ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಆರೂವರೆ ಕೆಜಿ ತೂಕದ ಶ್ರೀಗಂಧದ ಸಣ್ಣ ಸಣ್ಣ ತುಂಡುಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಹಿರೇಕೆರೂರು ಪಿಎಸ್ಐ ದೀಪು ಎಂ.ಟಿ. ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.