ರಾಣೆಬೆನ್ನೂರು: ತಮ್ಮನ ಮಗನಿಂದಲೇ ದೊಡ್ಡಪ್ಪ ಹತ್ಯೆಯಾದ ಘಟನೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಕಜ್ಜರಿ ಗ್ರಾಮದ ಬಸವರಾಜ ಬೆಲೂರು(50) ಕೊಲೆಯಾದ ವ್ಯಕ್ತಿ. ಮೃತನ ತಮ್ಮ ಕರಿಯಪ್ಪನ ಮಗ ಹನುಮಂತ ಬೆಲೂರು ಎಂಬಾತ ಕೊಲೆ ಆರೋಪಿಯಾಗಿದ್ದಾನೆ ಎನ್ನಲಾಗಿದೆ.
ಹಳೇ ವೈಷಮ್ಯದ ಹಿನ್ನೆಲೆ ಕುಡಗೋಲಿನಿಂದ ದೊಡ್ಡಪ್ಪನ ಮುಖಕ್ಕೆ ಹಲ್ಲೆ ಮಾಡಿದ್ದಾನೆ. ಇದರಿಂದ ತೀವ್ರ ರಕ್ತಸ್ರಾವವಾಗಿ ಬಸವರಾಜ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.