ಹಾವೇರಿ: ಕೊಲೆ ಆರೋಪಿಗಳನ್ನ ಬಂಧಿಸುವವರೆಗೂ ಶವ ಸಂಸ್ಕಾರ ಮಾಡುವುದಿಲ್ಲ ಎಂದು ಮೃತನ ಸಂಬಂಧಿಕರು ಪಟ್ಟು ಹಿಡಿದ ಘಟನೆ ರಟ್ಟಿಹಳ್ಳಿ ತಾಲೂಕಿನ ಬುಳ್ಳಾಪುರದಲ್ಲಿ ನಡೆದಿದೆ.
ಬುಳ್ಳಾಪುರ ಗ್ರಾಮದ 40 ವರ್ಷದ ಮರಿಯಪ್ಪ ಬೊಮ್ಮಳ್ಳೇರ್ ಚಿಕಿತ್ಸೆ ಫಲಕಾರಿಯಾಗದೆ ದಾವಣಗೆರೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈತನನ್ನ ಅದೇ ಗ್ರಾಮದ ರಾಮಪ್ಪ ಎಂಬಾತ ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಮರಿಯಪ್ಪನ ಸಂಬಂಧಿಕರು ಆರೋಪಿಸಿದ್ದಾರೆ.
ಇಬ್ಬರ ನಡುವೆ ಆಸ್ತಿ ವಿವಾದ ಇದ್ದು, ಈ ಹಿನ್ನೆಲೆ ಮೇ 23ರಂದು ಜಮೀನಿನಲ್ಲಿ ರಾಮಪ್ಪ, ಮರಿಯಪ್ಪಗೆ ವಿಷ ಕುಡಿಸಿದ್ದಾನೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ರಟ್ಟಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಆರೋಪಿಗಳನ್ನ ಪೊಲೀಸರು ಬಂಧಿಸುವ ಭರವಸೆ ನೀಡಿದ ನಂತರ ಮೃತನ ಅಂತ್ಯಕ್ರಿಯೆ ನೆರವೇರಿಸಲಾಯಿತು.